ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್ ಕ್ರೀಂ ಸವಿದ ಪ್ರಧಾನಿ ಮೋದಿ

ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್ ಕ್ರೀಂ ಸವಿದ ಪ್ರಧಾನಿ ಮೋದಿ

ನವದೆಹಲಿ: ಟೋಕಿಯೊಗೆ ತೆರಳುವ ಮೊದಲು, ಮೋದಿ ಅವರು ಭಾರತೀಯ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿ ಅತ್ಯುತ್ತಮ ಪ್ರದರ್ಶನ ನೀಡಲು ಪ್ರೇರೇಪಿಸಿದ್ದರು. ಟೋಕಿಯೊದಿಂದ ಹಿಂದಿರುಗಿದ ನಂತರ ಪಿ.ವಿ.ಸಿಂಧು ಅವರೊಂದಿಗೆ ಐಸ್ ಕ್ರೀಮ್ ತಿನ್ನುವುದಾಗಿ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಪ್ರಧಾನಿ ನಡೆದುಕೊಂಡಿದ್ದಾರೆ.
ಟೊಕಿಯೋ ಒಲಂಪಿಕ್ಸ್ ನಿಂದ ಹಿಂತಿರುಗಿದ ಬಳಿಕ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಜೊತೆಗೆ ಐಸ್ ಕ್ರೀಂ ತಿನ್ನುವುದಾಗಿ ಮಾತುಕೊಟ್ಟಿದ್ದರು. ಕೊಟ್ಟ ಮಾತಿನಂತೆ ಸೋಮವಾರ ತಮ್ಮ ನಿವಾಸದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಆತಿಥ್ಯ ನೀಡಿದ ಪ್ರಧಾನಿರವರು ಒಲಂಪಿಕ್ಸ್ ಪದಕ ವಿಜೇತೆ ಪಿ. ವಿ. ಸಿಂಧು ಜೊತೆಗೆ ಐಸ್ ಕ್ರೀಂ ಸವಿದು ಮಾತು ಉಳಿಸಿಕೊಂಡರು.
ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕ್ರೀಡಾಪಟುಗಳನ್ನು ಪ್ರಧಾನಿ ವೈಯಕ್ತಿಕವಾಗಿ ಭೇಟಿ ಮಾಡಿ, ಅಭಿನಂದಿಸುವ ಮೂಲಕ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದರು.

Related