ಮೊಬೈಲ್ ಫೀವರ್ ಕ್ಲಿನಿಕ್ ವ್ಯವಸ್ಥೆ

ಮೊಬೈಲ್ ಫೀವರ್ ಕ್ಲಿನಿಕ್ ವ್ಯವಸ್ಥೆ

ಬಳ್ಳಾರಿ : ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹೊಸಪೇಟೆ ನಗರಕ್ಕೆ ಕೋವಿಡ್19 ಮೊಬೈಲ್ ಕ್ಲಿನಿಕ್ ವ್ಯವಸ್ಥೆ ಆರಂಭಿಸಲಾಗಿದೆ.

ನಗರದ ಮುನ್ಸಿಪಲ್ ಮೈದಾನದ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ವ್ಯವಸ್ಥೆಗೆ ಚಾಲನೆ ದೊರೆತಿದ್ದು, ಪ್ರಸ್ತುತ ನಗರದಲ್ಲಿ ಒಂದು ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸಂದೀಪ್ ಸಿಂಗ್, ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಪಿ.ವೆಂಕಟೇಶ್, ಖಲಂದರ್, ಜಗನ್, ವೆಂಕಿ ಇದ್ದರು.

Related