ವ್ಯಾಕ್ಸಿನೇಷನ್ ಡ್ರೈವ್‌ ಗೆ ಶಾಸಕ ರಾಜಶೇಖರ ಪಾಟೀಲ್ ಚಾಲನೆ

ವ್ಯಾಕ್ಸಿನೇಷನ್ ಡ್ರೈವ್‌ ಗೆ ಶಾಸಕ ರಾಜಶೇಖರ ಪಾಟೀಲ್ ಚಾಲನೆ

ಹುಮನಾಬಾದ- ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ಡ್ರೈವ್‌ ಗೆ ಕಾಂಗ್ರೇಸ್ ತಾಲ್ಲೂಕು ಅಧ್ಯಕ್ಷ ಅಫ್ಸರಮಿಯ್ಯಾ ಅವರಿಗೆ ಎರಡನೇ ಡೋಸ್ ವ್ಯಾಕ್ಸಿನೇಷನ್ ಕೊಡಿಸುವ ಮೂಲಕ ಶಾಸಕ ರಾಜಶೇಖರ ಪಾಟೀಲ್ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿ ರಾಜ್ಯದ ಎಲ್ಲೆಡೆ ಅಲ್ಲದೇ ಗ್ರಾಮದಲ್ಲಿ ವ್ಯಾಕ್ಸಿನೇಷನ್ ಡ್ರಯೇವ್ ಹೆಚ್ಚು ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಸಣ್ಣ ಬಂಡಿ ವ್ಯಾಪಾರಿಗಳಿಗಲ್ಲದೇ ರಾಜಕಾರಣಿಗಳು ಮತ ಕ್ಷೇತ್ರದ ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನೇಷನ್ ಪಡೆದಿದ್ದು, ಪ್ರತಿಯೊಬ್ಬರು 1 ಮತ್ತು 2 ನೇ ಡೋಸ್ ಪಡೆದು ಕರೋನಾ ಮುಕ್ತವಾಗಿ ಎನ್ನುವುದೇ ನಮ್ಮ ಗುರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗಯ್ಯಾ ಹಿರೇಮಠ, ಡಾ.ಗೋವಿಂದ, ಡಾ.ನಾಗನಾಥ ಹೂಲಸೋರೆ, ಟಿಎಪಿಎಮೆಸ್ ಅಧ್ಯಕ್ಷ ಅಭಿಷೇಖ ಆರ್ ಪಾಟೀಲ್, ಡಿವೈಎಸ್‌ಪಿ ಕುಂಬಾರ, ಲಕ್ಷಂಣರಾವ ಬುಳ್ಳಾ, ದತ್ತಕುಮಾರ ಚಿದ್ರಿ, ಬಾಬುರಾವ ಪರಮಶೇಟ್ಟಿ, ಅಣ್ಣರಾವ ಪಾಟೀಲ್,ಡಾ ಚಂದಾ ಇನ್ನಿತರರಿದ್ದರು.

Related