ಅನುದಾನಕ್ಕೆ ಸಚಿವರ ಭರವಸೆ

 ಅನುದಾನಕ್ಕೆ ಸಚಿವರ ಭರವಸೆ

ಶಹಾಪುರ: ರೈತ ಬೆಳೆದ ಬೆಳೆಗಳನ್ನು ರಾಜ್ಯದ ಯಾವುದೇ ಮೂಲೆಯಲ್ಲಿಯೂ ಬೇಕಿದ್ದರೂ ಮಾರಾಟ ಮಾಡಬಹುದು. ತನ್ನ ಬೆಳೆಗೆ ರೈತನೇ ದರ ನಿಗದಿ ಮಾಡಿಕೊಳ್ಳಬಹುದು ಎಂದು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಎಸ್.ಟಿ ಸೋಮಶೇಖರ್ ಅವರು ಹೇಳಿದರು.

ನಗರದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 2014-15ನೇ ಸಾಲಿನ ಡಬ್ಲ್ಯೂ.ಐ.ಎಫ್ ಯೋಜನೆಯಡಿಯಲ್ಲಿ 24.86 ಕೋಟಿ ರೂ ಕಾಮಗಾರಿಗೆ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿ ಮಾತಾನಾಡಿದ ಅವರು ಎಪಿಎಂಸಿಗೆ 25 ಕೋಟಿ ರೂ ದಂಡ ವಸೂಲಿಯಾಗಿದ್ದು, ವಿಜಿಲೇನ್ಸ್‍ನ್ನು ರದ್ದುಗೊಳಿಸಲಾಗಿದೆ. 1.50 ಪೈಸ್ ಇದ್ದ ಸೆಸ್‍ನ್ನು 0.60 ಪೈಸೆಗೆ ನಿಗಧಿಪಡಿಸಲಾಗಿದೆ. 200 ಕೋಟಿ ನಬಾರ್ಡ್ ಮೂಲಕ ಎಲ್ಲಾ ಎಪಿಎಂಸಿಗೆ ಕೊಡಲಾಗುತ್ತಿದೆ. ನಗರಕ್ಕೆ 25 ಕೋಟಿ ರೂ ವೆಚ್ಚದ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿದ್ದು, ಶಾಸಕರು ಹಾಗೂ ಸಂಸದರು ಇನ್ನೂ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಸದನದಲ್ಲಿ ಚರ್ಚಿಸಿ ಅನುದಾನ ಒದಗಿಸುವ ಭರವಸೆ ನೀಡಿದರು.

ಎಪಿಎಂಸಿಯಲ್ಲಿ ತೊಂದರೆಗಳಾದರೆ ತಕ್ಷಣ ಪರಿಹರಿಸಲಾಗುವುದು. ಅಮಾಲರಿಗೆ ವಸತಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗುವುದೆಂದರು. ಕೋವಿಡ್ 3ನೇ ಅಲೆಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ಜನ ಸಹ ಸಹಕರಿಸುವಂತೆ ನುಡಿದರು. ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಗುರನಾಥರೆಡ್ಡಿಗೌಡ ಹಳಿಸಗರ, ಬಾಬುಗೌಡ, ಸೀಮಾ ಪಾರುತಿ, ಸುರೇಶ್ ಸಜ್ಜನ್, ಸೋಮಶೇಖರ ಗೋನಾಯಕ್, ವೀರಣ್ಣ ಎಸ್ ಸಾಹು, ಶೈಲಜಾ, ಶಹನಾಜ್ ಬೇಗಂ, ಶಿವಕುಮಾರ ದೇಸಾಯಿ, ಶೇಖರ ದೊರಿ, ಭೀಮಬಾಯಿ, ಸಂತೊಷ ಕುಮಾರ್ ಎಸ್ ನಿರ್ಮಲಕರ್, ರಾಯಪ್ಪಗೌಡ ಹುಡೇದ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಶಂಕರಗೌಡ ಎನ್ ಹೊಸ್ಮನಿ, ಬಸಣಗೌಡ ಪಾಟೀಲ್, ಶಶಿಕಲಾ ಸೇರಿದಂತೆ ಪಕ್ಷ ಬೇದ ಮರೆತು ಎಲ್ಲಾ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕೊಟ್;
ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆತ್ಮೀಯರಾಗಿದ್ದು ಅವರು ಗುರುಗಳಂತೆ. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಪಕ್ಷ ಭೇದವಿಲ್ಲಾ. ರಾಜಕೀಯನೇ ಬೇರೆ ಮತ್ತು ಗೆಳೆತನವೇ ಬೇರೆ. ಕಾಂಗ್ರೇಸ್‍ನಲ್ಲಿದ್ದಾಗ ಇದ್ದ ಗೆಳೆತನ ಈಗಲೂ ಸಹ ಇದೆ. ಇಬ್ಬರಲ್ಲೂ ಸಹ ಹೆಚ್ಚು ವಿಶ್ವಾಸವಿದ್ದು ಪಟ್ಟು ಬಿದ್ದು ಸದನಕ್ಕೆ ಗೈರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದೇ ಅವರ ಮೇಲಿನ ಪ್ರೀತಿ, ವಿಶ್ವಾಸಕ್ಕೆ ನೈಜ ಸಾಕ್ಷಿಯಾಗಿದೆ. ತಾಲೂಕಿನ ಅಭಿವೃದ್ಧಿಯನ್ನು ನೋಡಿದರೆ ಯಾವುದೇ ಜಿಲ್ಲೆಗಿಂತಲೂ ಕಮ್ಮಿಯಿಲ್ಲಾ ಸಗರನಾಡು, ಶರಣರ ಬಿಡು ಎನ್ನುವ ಹೆಗ್ಗಳಿಕೆ ಹೊಂದಿದ್ದು ಇದರ ಹಿಂದೆ ಶಾಸಕರ ಶ್ರಮ ಅಪಾರವಾದದ್ದು.
-ಎಸ್.ಟಿ ಸೋಮಶೇಖರ

Related