ಆದಿವಾಸಿ ಬುಡಕಟ್ಟು ಜನರ ಅನೇಕ ಸಮಸ್ಯೆಗಳನ್ನು ಆಲಿಸಿದ ಸಚಿವ ಬಿ. ನಾಗೇಂದ್ರ

ಆದಿವಾಸಿ ಬುಡಕಟ್ಟು ಜನರ ಅನೇಕ ಸಮಸ್ಯೆಗಳನ್ನು ಆಲಿಸಿದ ಸಚಿವ ಬಿ. ನಾಗೇಂದ್ರ

ಮೈಸೂರು: ವಿಶ್ವ ಬುಡಕಟ್ಟು ದಿನಾಚರಣೆಯ ಅಂಗವಾಗಿ ಮೈಸೂರು ಜಿಲ್ಲೆಯ ಹೆಚ್. ಡಿ ಕೋಟೆ ತಾಲೂಕಿನ ಗೋಳೂರು ಹಾಡಿ ವಾಸವಾಗಿರುವ ಆದಿವಾಸಿ ಬುಡಕಟ್ಟು ಜನರ ನಡುವೆ ವಾಸ್ತವ್ಯ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರರವರು ಪಾಲ್ಗೊಂಡರು. ಈ ವೇಳೆ ಅಲ್ಲಿನ ಜನರು ವಿಶೇಷವಾಗಿ ಕಾಡಿನ ಮರದ ಎಳೆಗಳಿಂದ ತಯಾರಿ ಮಾಡಿದ್ದ ಮಾಲೆಯನ್ನು ಹಾಕಿ ಸ್ವಾಗತಿಸಿದರು.

ಮಧ್ಯರಾತ್ರಿಯವರೆಗೆ ಮಾನ್ಯ ಸಚಿವರು ಇಲಾಖೆಯ ಅಲ್ಲಿನ ಜನರ ಜೊತೆಗೆ ಸಂವಾದ ನಡೆಸಿ ಅವರ ಜೀವನದ ಶೈಲಿ, ಶಿಕ್ಷಣದ ವ್ಯವಸ್ಥೆ, ಆಹಾರ ಪದ್ಧತಿ, ಅರೋಗ್ಯ  ಬಗ್ಗೆ ಅಲ್ಲಿನ ಆದಿವಾಸಿ ಬುಡಕಟ್ಟು ಜನರ ಅನೇಕ ಸಮಸ್ಯೆಗಳನ್ನು ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.

ರಾತ್ರಿ ಗೋಳೂರು ಹಾಡಿಯ ಬುಡಕಟ್ಟು ನಿವಾಸಿಗಳ ಮನೆಯಲ್ಲಿ ಊಟವನ್ನು ಮಾಡಿ ಅವರು ದಿನನಿತ್ಯ ತಿನ್ನುವ ಊಟದ ಪದ್ಧತಿ ತಿಳಿದರು. ನಂತರ ಅಲ್ಲಿನ ನಿವಾಸಿ ಕೃಷ್ಣರವರ ಗುಡಿಸಲಿನಲ್ಲಿ ರಾತ್ರಿ ಇಡೀ ವಾಸ್ತವ್ಯ ಮಾಡಿದರು.

ರಾತ್ರಿ ಇಡೀ ವಾಸ್ತವ್ಯ ಮಾಡಿ ಬೆಳಿಗ್ಗೆ ಅಲ್ಲಿನ ಹಾಡಿ ಜನರ ಮನೆ & ಗುಡಿಸಲು ಬಳಿ ತೆರಳಿ ಅವರ ಅರೋಗ್ಯ ಸಮಸ್ಯೆಗಳನ್ನು ತಿಳಿದು, ಹೆಚ್. ಡಿ ಕೋಟೆ ತಾಲೂಕಿನ ಬುಡಕಟ್ಟು ಸಮುದಾಯ ಮುಖಂಡರ ಜೊತೆ ಉಪಹಾರ ಸವಿದು ನಂತರ ಅವರ ಮನವಿಯನ್ನು ಸ್ವೀಕರಿಸಿ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಮಾನ್ಯ ಮುಖ್ಯಮಂತ್ರಿಗಳ ಬಳಿ ತಿಳಿಸಿ ಸೂಕ್ತ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು

Related