ಮೆಟ್ರೋ ಪ್ರಯಾಣಿಕರೇ ಗಮನಿಸಿ ಡಿ.31 ರಾತ್ರಿ ಈ ಮೆಟ್ರೋ ನಿಲ್ದಾಣ ಬಂದ್

ಮೆಟ್ರೋ ಪ್ರಯಾಣಿಕರೇ ಗಮನಿಸಿ ಡಿ.31 ರಾತ್ರಿ ಈ ಮೆಟ್ರೋ ನಿಲ್ದಾಣ ಬಂದ್

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಯಂದು ಬೆಂಗಳೂರಿನ ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ ಗಳಲ್ಲಿ ಎಲ್ಲೆಲ್ಲದ ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಈ ವರ್ಷ ಹೊಸ ವರ್ಷ ಆಚರಣೆಗೆಂದು ಬ್ರಿಗೇಡ್ ರೋಡ್ ಮತ್ತು ಎಂಜಿ ರೋಡ್ ನ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ವರದಿಯಾಗಿದ್ದು, ಜನದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮವನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಡಿಸೆಂಬರ್ 31ರಂದು ನಮ್ಮ ಮೆಟ್ರೋ ಸಂಚಾರವು, ಸುಮಾರು ರಾತ್ರಿ 2:00 ಗಂಟೆಯವರೆಗೆ ತನ್ನ ಸಂಚಾರವನ್ನು ಮುಂದುವರಿಸುತ್ತದೆ. ಆದರೆ ಕೇವಲ ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ ನಲ್ಲಿ ಮಾತ್ರ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ

ಹೌದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷವೂ ಹೊಸ ವರ್ಷ ಆಚರಣೆಯನ್ನು ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡಲ್ಲಿ ಅತಿ ವಿಭಿನ್ನ ಆಚರಿಸಲಾಗುತ್ತದೆ. ಆದರೆ ಈ ವರ್ಷವೂ ನಮ್ಮ ಮೆಟ್ರೋ ಸಂಸ್ಥೆಯು ಜನಸಂದನೆಯನ್ನು ನಿಯಂತ್ರಿಸಲೆಂದು ಬ್ರಿಗೇಡ್ ರೋಡ್ ಮತ್ತು ಎಂಜಿ ರೋಡ್ ನ ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗುವುದು ಎಂದು ಹೇಳಲಾಗುತ್ತಿದೆ.

ಜನದಟ್ಟಣೆಯನ್ನು ನಿರ್ವಹಿಸಲು, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯ ಮೆಟ್ರೋ ನಿಲ್ದಾಣಗಳನ್ನು ಡಿಸೆಂಬರ್ 31ರ ರಾತ್ರಿ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಪೂರ್ವಭಾವಿ ಕ್ರಮವು ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಗಮ ಸಂಚಾರವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.

ಕಳೆದ ವರ್ಷದ ಜನದಟ್ಟಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಹೊಸ ವರ್ಷದ ಆಚರಣೆಯ ನಂತರ ಈ ನಿಲ್ದಾಣಗಳ ಬಳಿಯಿಂದ ಪ್ರಯಾಣಿಸುವ ಜನರು ಅನಿಲ್ ಕುಂಬ್ಳೆ ಜಂಕ್ಷನ್ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣದಿಂದ ರೈಲುಗಳನ್ನು ಹತ್ತಬಹುದಾಗಿದೆ.

Related