ಗಂಡು-ಹೆಣ್ಣಿಗೆ ಅವಕಾಶವಿದೆ, ನಮಗ್ಯಾಕಿಲ್ಲ?

ಗಂಡು-ಹೆಣ್ಣಿಗೆ ಅವಕಾಶವಿದೆ, ನಮಗ್ಯಾಕಿಲ್ಲ?

ತುಮಕೂರು  : ಈ ಸಮಾಜದಲ್ಲಿ ಬದುಕಲು ಗಂಡಿಗೆ ಅವಕಾಶವಿದೆ, ಹೆಣ್ಣಿಗೆ ಅವಕಾಶವಿದೆ. ನಮಗ್ಯಾಕಿಲ್ಲ. ಸಮಾಜ, ಕುಟುಂಬದವರು ನಮ್ಮನ್ನು ನಾವಿರುವಂತೆಯೇ ಒಪ್ಪಿಕೊಳ್ಳಬೇಕು.., ಇದು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗುವ ಮೂಲಕ ತೃತೀಯಲಿಂಗಿ ಸಮುದಾಯದ ಕೀರ್ತಿ ಬೆಳಗಿರುವ ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರ ನೇರ ಆಗ್ರಹ.

ಸಂವಾದದಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದ ಅವರು ಯಾರು ಹುಟ್ಟುತ್ತಲೇ ಜೋಗತಿ, ಜೋಗಪ್ಪ, ಮಂಗಳಮುಖಿಯಾಗಿರಬೇಕೆಂದು  ಜನ್ಮ ತಾಳಿರುವುದಿಲ್ಲ. ಶರೀರ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನುಸಾರ ಅವರು ಹೆಣ್ಣಾಗಿ, ಗಂಡಾಗಿ ಬದಲಾಗುತ್ತಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಮನೆಯಿಂದ ಆಚೆಗೆ ನೂಕಿ ಸಮಾಜದ ಅವಕೃಪೆ, ನಿಂದನೆಗೆ ಗುರಿಯಾಗಿಸುವುದಕ್ಕಿಂತ, ಮನೆಯವರು, ಸಮಾಜದವರು ಅವಿರದ್ದಂತೆಯೇ ಸ್ವೀಕರಿಸಿದರೆ ತೃತೀಯ ಲಿಂಗಿಗಳು ಬದುಕು ಕಟ್ಟಿಕೊಳ್ಳಬಹುದಾಗಿದೆ.

ಕಳ್ಳರು, ಕೊಲೆಗಡುಕರನ್ನೆಲ್ಲ ತಮ್ಮ ಮಕ್ಕಳೆಂದು ಒಪ್ಪುವ ಸಮಾಜ ನಮ್ಮನ್ನೇಕೆ ಮನೆಯ ಸದಸ್ಯರೆಂದು ಉಳಿಸಿಕೊಳ್ಳಬಾರದು. ನಮಗೂ ಬದುಕಲು ಸಂವಿಧಾನಬದ್ದವಾದ ಹಕ್ಕಿದೆ. ನಮ್ಮಲ್ಲಿ ಇತರರಿಗಿಂತಲೂ ಹೆಚ್ಚು ಪ್ರೀತಿ ತೋರುವ ಮನಸ್ಸು, ಮಾನವೀಯತೆ, ಅಚ್ಚುಕಟ್ಟುತನವಿದೆ ಎಂದು ಹೇಳಿದರು.

Related