ಆಲೂಗಡ್ಡೆ ಹಲವಾರು ಕಾಯಿಲೆಗಳಿಗೆ ಮದ್ದು

ಆಲೂಗಡ್ಡೆ ಹಲವಾರು ಕಾಯಿಲೆಗಳಿಗೆ ಮದ್ದು

ಬೆಂಗಳೂರು, ಫೆ. 22: ಸಾಮಾನ್ಯವಾಗಿ ನಾವೇಲ್ಲರು ಆಲೂಗಡ್ಡೆಯನ್ನು ಪಲ್ಯ, ಸಾಂಬಾರು, ಬಜ್ಜಿ, ಬೋಂಡಾ, ಹೀಗೆ  ವಿಧಿಗಳು ತಿಂಡಿತಿನಿಸುಗಳನ್ನು ಮಾಡುತ್ತೇವೆ. ಆಲೂಗಡ್ಡೆ ತಿನ್ನುವುದರಿಂದ ಮಾನವನ ದೇಹಕ್ಕೆ ಏನೇಲ್ಲ ಲಾಭವಿದೆ ಎಂದು ನಾವಿಂದು  ತಿಳಿದುಕೊಳ‍್ಳೊಣ.

ಆಲೂಗಡ್ಡೆಯ ನಿತ್ಯ ನಿಯಮಿತ ಸೇವನೆಯಿಂದ ತಮ್ಮ ದೇಹಕ್ಕೆ ಉಂಟಾಗುವ ಪ್ರಯೋಜನಗಳ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಆಲೂಗಡ್ಡೆಗಳಲ್ಲಿ ಇರುವ ಅನೇಕ ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ದೇಹಕ್ಕೆ ಬಹಳಷ್ಟು ಸಹಕಾರಿಯಾಗಿ ಕೆಲಸ ಮಾಡುತ್ತವೆ.

ಜೀರ್ಣಕ್ರಿಯೆ: ಆಲೂಗಡ್ಡೆ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಆಲೂಗಡ್ಡೆಗಳಲ್ಲಿ ಆಲ್ಕಲೈನ್ ಎಂಬ ಅಂಶ ಬಹಳಷ್ಟಿದ್ದು, ಮನುಷ್ಯನ ದೇಹದ ಅನ್ನನಾಳವನ್ನು ಶುಚಿಗೊಳಿಸಿ, ಅದಕ್ಕೆ ಬೇಕಾದ ಪೌಷ್ಟಿಕ ಸತ್ವಗಳನ್ನು ಒದಗಿಸಿ ಜೀರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ರೋಗ ನಿರೋಧಕ: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಆಲೂಗಡ್ಡೆ ಜ್ಯೂಸ್ ನಲ್ಲಿ ಮನುಷ್ಯನ ದೇಹದ ಸೋಂಕು ಮತ್ತು ಸಾಮಾನ್ಯ ಶೀತದ ನಿವಾರಣೆಗಾಗಿ ಹೇಳಿ ಮಾಡಿಸಿದ ಆಂಟಿ – ಆಕ್ಸಿಡೆಂಟ್ ಎಂದು ಗುರುತಿಸಿಕೊಂಡ ವಿಟಮಿನ್ ‘ ಸಿ ‘ ಅಂಶ ಗಣನೀಯ ಪ್ರಮಾಣದಲ್ಲಿ ಇದೆ. ಈ ಅಂಶ ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯನ್ನು ಹೊರಗಿನ ಹಾನಿಕಾರಕ ರೋಗಕಾರಕಗಳಿಂದ ರಕ್ಷಿಸಿ ದೀರ್ಘ ಕಾಲದ ಕಾಯಿಲೆಗಳನ್ನು ಆರಾಮವಾಗಿ ಗುಣ ಪಡಿಸುತ್ತದೆ.

ಎದೆಯುರಿಯ ನಿವಾರಣೆ: ಮನುಷ್ಯನಿಗೆ ಎದೆಯುರಿ ಉಂಟಾಗುವ ಕಾರಣವೆಂದರೆ ಹೊಟ್ಟೆಯಲ್ಲಿನ ಆಮ್ಲ ಹಿಂಬದಿಯಲ್ಲಿ ಹರಿಯಲು ಪ್ರಾರಂಭ ಮಾಡಿ ನೇರವಾಗಿ ಅನ್ನನಾಳಕ್ಕೆ ಬಂದು ಸೇರುತ್ತದೆ. ಅನ್ನನಾಳ ಎದೆ ಭಾಗದಲ್ಲಿರುವುದರಿಂದ ಸಾಮಾನ್ಯವಾಗಿ ಎದೆಯುರಿ ಉಂಟಾದಂತೆ ಭಾಸವಾಗುತ್ತದೆ. ಆಲೂಗಡ್ಡೆ ಜ್ಯೂಸ್ ನಲ್ಲಿ ಹೊಟ್ಟೆಯ ಒಳ ಪದರಕ್ಕೆ ಬೇಕಾದ ಅಗತ್ಯ ಸಂಯುಕ್ತಗಳು ಬಹಳಷ್ಟಿವೆ. ಇವುಗಳು ಹೊಟ್ಟೆಯ ಆಮ್ಲವನ್ನು ಹೆಚ್ಚಾಗದಂತೆ ತಗ್ಗಿಸಿ ಜಠರಗರುಳಿನ ಉರಿಯೂತವನ್ನು ಗುಣ ಪಡಿಸುತ್ತದೆ. ಆದ್ದರಿಂದ ಊಟಕ್ಕೆ ಅರ್ಧ ಗಂಟೆ ಮುಂಚೆ ಪ್ರತಿ ದಿನ 3 ರಿಂದ 4 ಟೇಬಲ್ ಚಮಚಗಳಷ್ಟು ಆಲೂಗಡ್ಡೆ ಜ್ಯೂಸ್ ಕುಡಿಯುವುದು ಸೂಕ್ತ ಎಂಬುದು ನಮ್ಮ ಭಾವನೆ.

 

 

Related