ಮೆಟ್ರೋ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ

ಮೆಟ್ರೋ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಮೆಟ್ರೋ ಸಂಚಾರ ನಗರದಲ್ಲಿ ಈಗಾಗಲೇ ಪ್ರಾರಂಭವಾಗಿದ್ದು ಹಸಿರು ಲೈನು ಮತ್ತು ಪರ್ಪನ್ ಲೈನು ಮೆಟ್ರೋ ಮಾರ್ಗಗಳು ಸಂಚಾರ ನಡೆಸುತ್ತಿದೆ. ಅದರಂತೆ ಹಳದಿ ಲೈನ್ ಪ್ರಾರಂಭ ಮಾಡಲು ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು ಬೊಮ್ಮನಹಳ್ಳಿ ನಗರದಲ್ಲಿ ನಿರ್ಮಿಸಿರುವ ಮೆಟ್ರೋ ನಿಲ್ದಾಣಕ್ಕೆ ರೂಪೇನ ಅಗ್ರಹಾರ ನಿಲ್ದಾಣ ವೆಂದು ನಾಮಕರಣ ಮಾಡಬೇಕೆಂದು ಸ್ಥಳೀಯರು ಹೋರಾಟ ಕೈಗೊಂಡಿದ್ದಾರೆ.

ಹೊಸೂರು ಮುಖ್ಯ ರಸ್ತೆಗೆ ಹಳದಿ ಲೈನ್ ಸಂಪರ್ಕದ ಕೆಲಸ ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಸಂಪೂರ್ಣ ಗೊಳ್ಳಲಾಗುತ್ತಿದ್ದು ಇಲ್ಲಿ ಹಾದು ಹೋಗುತ್ತಿರುವಂತಹ ಮೆಟ್ರೋ ನಿಲ್ದಾಣಗಳಿಗೆ ಅವೈಜ್ಞಾನಿಕವಾಗಿ ಹೆಸರುಗಳನ್ನು ಇಡಲಾಗುತ್ತಿದೆ ಎಂದು ಸ್ಥಳೀಯರು ಮೆಟ್ರೋ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಸುಮಾರು ಸಾವಿರಾರು ವರ್ಷಗಳಿಂದಲೂ ನಮ್ಮ ಊರು ರೂಪೇನ ಅಗ್ರಹಾರ ವೆಂದು ಕರೆಯಲಾಗುತ್ತಿದ್ದು ಈಗ ರೂಪೇನ ಅಗ್ರಹಾರದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣವಾಗಿದ್ದು ಅದಕ್ಕೆ ಬೊಮ್ಮನಹಳ್ಳಿ ಮೆಟ್ರೋ ನಿಲ್ದಾಣವೆಂದು ನಾಮಕರಣ ಮಾಡಿದ್ದಾರೆ.

ನಮ್ಮ ಊರಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ರೂಪೇನ ಅಗ್ರಹಾರ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಸ್ಥಳೀಯರು ಮೆಟ್ರೋ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದಾರೆ.

 

 

Related