ಮಹಾಸ್ಫೋಟ ವಿಡಿಯೋ: ಬೈರೂಟ್ ನಗರ ಛಿದ್ರ

ಮಹಾಸ್ಫೋಟ ವಿಡಿಯೋ: ಬೈರೂಟ್ ನಗರ ಛಿದ್ರ

ಬೈರೂಟ್: ನೋಡುನೋಡುತ್ತಲೇ ದೊಡ್ಡ ಸ್ಫೋಟ, ಆಕಾಶದ ತುಂಬೆಲ್ಲಾ ದಟ್ಟ ಹೊಗೆ, ಜನರ ಕಿರುಚಾಟ, ಅರಚಾಟ, ಏನಾಗುತ್ತಿದೆ ಎಂದು ನೋಡುತ್ತಿದ್ದಂತೆಯೇ ಸುತ್ತಮುತ್ತಲ ಪ್ರದೇಶ ಸಂಪೂರ್ಣ ಛಿದ್ರ.

ಹೌದು ಈ ಮಹಾಸ್ಫೋಟ ನಡೆದದ್ದು, ಮದ್ಯ ಪ್ರಾಚ್ಯದ ಲೆಬನಾನ್ ರಾಜಧಾನಿ ಬೈರೂಟ್‍ನಲ್ಲಿ.

ಸರ್ಕಾರ ಕೆಲವು ವರ್ಷಗಳ ಹಿಂದೆ ವಶಪಡಿಸಿಕೊಂಡಿದ್ದ ಸ್ಫೋಟಕ ಸಾಮಾಗ್ರಿಗಳನ್ನು ಸಂಗ್ರಹಿಸಿಡಲಾಗಿದ್ದ ಸ್ಥಳದಲ್ಲಿ 2750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡು 80 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಹಾಸ್ಫೋಟ ಇಡೀ ಬೈರೂಟ್ ನಗರವನ್ನೇ ಅಲುಗಾಡಿಸಿದ್ದು, ಕಟ್ಟಡಗಳು ಕುಸಿದಿದೆ. ಕಟ್ಟಡಗಳ ಅವಶೇಷಗಳಡಿ ನೂರಾರು ಜನ ಸಿಲುಕಿದ್ದಾರೆ.

Related