ಹಂಪಿ ವೀಕ್ಷಣೆಗೆ ಮಾಸ್ಕ್ ಕಡ್ಡಾಯ

ಹಂಪಿ ವೀಕ್ಷಣೆಗೆ ಮಾಸ್ಕ್ ಕಡ್ಡಾಯ

ಬಳ್ಳಾರಿ : ದೇಶದ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಹಾಗು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ.

ಕೊರೋನಾ ಹಿನ್ನೆಲೆ ಜಿಲ್ಲೆಯಲ್ಲಿ ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಬರುವ ದೇಶ ವಿದೇಶಿ ಪ್ರವಾಸಿಗರ ಗುರುತಿನ ಚೀಟಿ ಸಂಗ್ರಹಿಸಲು ಹಂಪಿ ವೃತ್ತದ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ನಿರ್ಧರಿಸಲಾಗಿದೆ.

ವೀಕ್ಷಣೆಗೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಅಥವಾ ದ್ವಿಚಕ್ರ ವಾಹನ ಚಾಲನಾ ಪತ್ರದ ಪರವಾನಗಿ ಚೀಟಿ, ಮತದಾರರ ಗುರುತಿನ ಚೀಟಿ ಸೇರಿ ಇನ್ನಿತರ ಗುರುತಿನ ಚೀಟಿ ಸಂಗ್ರಹಿಸಲು ಹಂಪಿ ವೃತ್ತದ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯು ನಿರ್ಧರಿಸಿದೆ.

Related