ಸಮೃದ್ದಿ ಫೌಂಡೇಷನ್ ವತಿಯಿಂದ 300 ಗರ್ಭಿಯ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ

ಸಮೃದ್ದಿ ಫೌಂಡೇಷನ್ ವತಿಯಿಂದ 300 ಗರ್ಭಿಯ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ

ಬೊಮ್ಮನಹಳ್ಳಿ: ಸೀಮಂತ ಕಾರ್ಯವು ನಮ್ಮ ಭಾರತೀಯ ಗರ್ಭಿಣಿ ಮಹಿಳೆಯರಿಗೆ ಎಂದೆದಿಗೂ  ಸದಾ ಸವಿನೆನಪಾಗಿ ಚಿರಕಾಲ ಉಳಿಯುವ ಹೃದಯದ ಸ್ಪರ್ಷಿಕಾರ್ಯಕ್ರಮವಾಗಿದೆ ಎಂಬುದಾಗಿ ಶಾಸಕ ಎಂ.ಸತೀಶ್ ರೆಡ್ಡಿ ಹರ್ಷ ವ್ಯಕ್ತಪಡಿಸಿದರು.

ಅವರು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹೆಚ್‌.ಎಸ್‌.ಆರ್.ಲೇಔಟ್ ನಲ್ಲಿ ಸಮಾಜ ಸೇವಕ ರವಿ.ಬಿ.ಟೀಮ್ ಮತ್ತು ಸಮೃದ್ದಿ ಫೌಂಡೇಷನ್ ವತಿಯಿಂದ ಬಿ.ರವಿ ಅವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ 300  ಗರ್ಭಿಯ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಸೇರಿದಂತೆ ಆಯುಷ್ಮಾನ್ ಭಾರತ್ ವಿಮಾ ಕಾರ್ಡ್ ವಿತರಣೆ ಜೊತೆಯಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ಶಾಸಕ ಎಂ.ಸತೀಶ್ ರೆಡ್ಡಿ ಚಾಲನೆ ನೀಡಿ ಮಾತನಾಡಿದರು.

ತವರಿನ ನೆನಪು ತಂದ ಕಾರ್ಯಕ್ರಮ: ನಮ್ಮ ಮನೆಯ ಅಕ್ಕ ತಂಗಿಯರು ಗರ್ಭಿಯಾದ ಸಂದರ್ಭದಲ್ಲಿ ತವರಿನ ಮನೆಯವರು ತಂದೆ ತಾಯಿ ಅಣ್ಣತಮ್ಮಂದಿರು ಜೊತೆಗೂಡಿ ತವರಿನ ಸಿರಿ ದೇವಿಗೆ ಸೀಮಂತ ಮಾಡಿ ಮಡಿಲು‌ತುಂಬಿ ಸಂಭ್ರಮಿಸುತ್ತಾರೆ ಇಂತಹ ಭಾನಾತ್ಮಕ ಹಾಗೂ ಸಂಪ್ರದಾಯ ಪರಂಪರೆಯನ್ನು ಸಾರ್ವಜನಿಕವಾಗಿ ಆಚರಿಸಿ ಸಂಭ್ರಮಿಸುವುದು ಬಹಳ ವಿರಳವಾಗಿದೆ ಇಂತಹ ಅಮೂಲ್ಯ ಅನುಬಂಧವನ್ನು ಸೆಳೆಯಲು ಕಾರಣರಾದ ರವಿ.ಬಿ.ಟೀಮ್ ಎಲ್ಲ ಮಹಿಳಾ ಶಕ್ತಿ‌ಯ ಆಶೀರ್ವಾದ ಇದ್ದೇ ಇರುತ್ತದೆ ಎಂಬುದಾಗಿ ತಿಳಿಸಿದರು.

ಸಾಮಾಜಿಕ ಸಂದೇಶದ ಪ್ರೇರಕ ಶಕ್ತಿ:  ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ ಒಬ್ಬ ಮನುಷ್ಯನ ಹುಟ್ಟು ಭೂಮಿಗೆ ಭಾರವಾಗಬಾರದು ಅತನ ಹುಟ್ಟು ಸಾಮಾಜಿಕ ಸಂದೇಶಗಳನ್ನು ನೀಡುವುದರ ಜೊತೆಯಲ್ಲಿ ಹತ್ತಾರು ಜನರಿಗೆ ಪ್ರೇರಣೆ ನೀಡುವಂತಹ ಶಕ್ತಿಯಾಗಬೇಕು ಈ ನಿಟ್ಟಿನಲ್ಲಿ ರವಿ.ಬಿ.ಟೀಮ್ ತಂಡ ಹಾಗೂ ಸಮೃದ್ದಿ ಫೌಂಡೇಷನ್ ರವರು ತಮ್ಮ ನಾಯಕರು ಜನ್ಮ ದಿನವನ್ನು ಸಾರ್ವತ್ರಿಕವಾದ ರೀತಿಯಲ್ಲಿ ವಿವಿಧ ಸೇವಾಕಾರ್ಯಗಳ ಮೂಲಕ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಮತ್ತು ಮಹತ್ವವನ್ನು ಪಡೆದುಕೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜ‌ ಸೇವಕ ಹಾಗೂ ಯುವ ನಾಯಕ ರವಿ.ಬಿ.ಹೊಂಗಸಂದ್ರ ವಾರ್ಡಿನ ಮಾಜಿ ಬಿಬಿಎಂಪಿ ಸದಸ್ಯೆ ಭಾರತಿ ರಾಮಚಂದ್ರ, ಬೆಂಗಳೂರು ದಕ್ಷಿಣ ನಗರ ಜಿಲ್ಲಾ ಬಿಜೆಪಿ‌ ಮಹಿಳಾ ಮೋರ್ಚಾದ ಅಧ್ಯಕ್ಷೆ ರಾಣಿ ಶ್ರೀನಿವಾಸ್ ರೆಡ್ಡಿ, ಹಿರಿಯ ಮುಖಂಡರಾದ ವೇಣುಗೋಪಾಲ ರೆಡ್ಡಿ, ಶ್ರೀಧರ್ ರೆಡ್ಡಿ, ಹೆಚ್.ಎಸ್.ಆರ್.ವಾರ್ಡ್ ಬಿಜೆಪಿ ವಾರ್ಡ್ ಅಧ್ಯಕ್ಷ ರಾಘವೇಂದ್ರ, ರವಿ.ಬಿ.ಟೀಮ್ ಸದಸ್ಯರು ಹಾಗೂ ಸಮೃದ್ದಿ ಫೌಂಡೇಷನ್ ಸದಸ್ಯರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಗೋ ಪೂಜೆ ಮೂಲಕ ಆರಂಭವಾದ ಕಾರ್ಯಕ್ರಮ ಓಂ ಶಕ್ತಿ ಭಕ್ತಮಂಡಳಿಯ 1000 ಕ್ಕೂ ಹೆಚ್ಚು ಮಹಿಳೆಯರು  ಭಾಗವಹಿಸಿ ಜಗನ್ಮಾತೆ ಶ್ರೀ ಓಂ ಶಕ್ತಿಗೆ ಗಂಜೆ‌ಸೇವೆಯ ಸಮರ್ಪಣೆ ಮಾಡಿದರು.

500ಕ್ಕೂ ಹೆಚ್ಚು ಫಲಾನುಭವಿಗಳಿಗೆ  ಭಾರತ್ ಕಾರ್ಡ್ ಅನ್ನು ವಿತರಣೆ ಮಾಡಿದರು, 1000ಕ್ಕೂ ಹೆಚ್ಚು ಬಡವರಿಗೆ ಹತ್ತು ಲಕ್ಷಮೊತ್ತದ  ಅಪಘಾತ ವಿಮೆಯ ಕಾರ್ಡ್ ವಿತರಣೆ.ಸ್ವಾತಂತ್ರ್ಯ ಹೋರಾಟಗಾರ  2000  ಪುಸ್ತಕಗಳನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿತರಣೆ,300 ಕ್ಕೂ ಹೆಚ್ಚು ಬಡ ಗರ್ಭಿಣಿ ಮಹಿಳೆಯರಿಗೆ ಸೀಮಂತ ಹಾಗೂ ಮಡಿಲು ತುಂಬುವ ಬಾಗಿನ,

ಉಚಿತ ಆರೋಗ್ಯ ತಪಾಸಣೆ ಶಿಬಿರ, ಬೊಮ್ಮನಹಳ್ಳಿಯ ಸುತ್ತ ಮುತ್ತಲಿನ 5-6 ಅನಾಥ ಆಶ್ರಮದ ಮಕ್ಕಳಿಗೆ ಅನ್ನದಾಸೋಹ, ಹಾಗೂ ಹೆಚ್.ಎಸ್.ಆರ್.ವಾರ್ಡಿನ ಹಾಗೂ ಗುಂಡತೋಪ್ ನ 5000 ಕ್ಕೂ ಹೆಚ್ಚು  ನಿವಾಸಿಗಳಿಗೆ ಬೂರಿಭೋಜನ‌ ಅನ್ನದಾನ ಹಮ್ಮಿಕೊಳ್ಳಲಾಗಿತ್ತು.

Related