ಮಾಲ್’ಗಳು ತೆರೆಯಲು ಅವಕಾಶವಿಲ್ಲ -ಬಿಬಿಎಂಪಿ

ಮಾಲ್’ಗಳು ತೆರೆಯಲು ಅವಕಾಶವಿಲ್ಲ -ಬಿಬಿಎಂಪಿ

ಬೆಂಗಳೂರು: ಲಾಕ್’ಡೌನ್ ಸಡಿಲಗೊಂಡ ಹಿನ್ನೆಲೆ  ಕೆಲ ದಿನಗಳ ಹಿಂದಷ್ಟೇ ಸರ್ಕಾರ ದೇಗುಲ, ಹೋಟೆಲ್ ಮಾಲ್ ಗಳು ಸೇರಿದಂತೆ ಇನ್ನಿತರೆ ಪ್ರವಾಸಿ ವಲಯಗಳ ಪುನರಾರಂಭಕ್ಕೆ ಅವಕಾಶ ನೀಡಿತ್ತು. ಹಲವು ಮಾರ್ಗಸೂಚಿಗಳನ್ನೂ ಕೂಡ ಬಿಡುಗಡೆ ಮಾಡಿದೆ.ಆದರೆ ಕಂಟೈನ್ಮೆಂಟ್ ಝೋನ್ ಗಳಲ್ಲಿರುವ ಶಾಪಿಂಗ್ ಮಾಲ್ ಗಳು ತೆರೆಯಲು ಅವಕಾಶವಿಲ್ಲ ಎಂದು ಬಿಬಿಎಂಪಿ  ಸ್ಪಷ್ಟಪಡಿಸಿದೆ.

ಅಗತ್ಯ ಸೇವೆಗಳು ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೀಕರು, ಅನಾರೋಗ್ಯ ಪೀಡಿತರು, ಗರ್ಭಿಣಿಯರು ಮನೆಯಲ್ಲಿಯೇ ಇರುವಂತೆ ಸಲಹೆ ನೀಡಿದೆ. ಸಲಹೆಗಳನ್ನು ಮೀರಿ ಮಾಲ್ ಗಳಿಗೆ ಬರುವ ಇಂತಹವರಿಗೆ ಅವಕಾಶ ನೀಡುವುದು, ಬಿಡುವುದು ಆಯಾ ಮಾಲ್ ಗಳಿಗೆ ಬಿಟ್ಟ ವಿಚಾರ ಎಂದು ತಿಳಿಸಿದೆ.

Related