ಲವ್ ಮೂಡಿನಲ್ಲಿ ನಿಖಿಲ್

ಲವ್ ಮೂಡಿನಲ್ಲಿ ನಿಖಿಲ್

ಬೆಂಗಳೂರು, ಫೆ. 17 : ಸಾವು ನಮ್ಮನ್ನು ಬೇರ್ಪಡಿಸುವವರೆಗೂ ನಾವಿಬ್ಬರೂ ಕೈಯನ್ನು ಹೀಗೆ ಹಿಡಿದಿರಬೇಕು ಎಂಬುದು ನನ್ನ ಇಚ್ಛೆ. ನನ್ನ ಮುಂದಿನ ಜನ್ಮ ಎಂಬುದು ಇದ್ದರೆ, ಆ ಜನ್ಮದಲ್ಲೂ ನೀವೇ ನನ್ನ ಬಾಳ ಸಂಗಾತಿ ಆಗಬೇಕು ಎಂದು ರೇವತಿ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನಟ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥವಾದ ಬಳಿಕ ತನ್ನ ಭಾವಿ ಪತ್ನಿಯ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆಷ್ಟೆ ಪ್ರೇಮಿಗಳ ದಿನಾಚರಣೆಯಂದು ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಇದೀಗ ಮೊದಲ ಬಾರಿಗೆ ರೇವತಿ ಮೇಲಿರುವ ಭಾವನೆಯನ್ನು ಹೇಳಿಕೊಂಡಿದ್ದಾರೆ
“ನನ್ನ ರಾಜಕುಮಾರಿ, ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಸಮಯ ಕಳೆದಂತೆ ಸೌಂದರ್ಯ ಮಾಸಬಹುದು. ಆದರೆ ಒಳ್ಳೆಯ ಗುಣ ಸದಾ ನಮ್ಮ ಜೊತೆಯಲ್ಲಿಯೇ ಉಳಿಯುತ್ತದೆ. ನಾನು ನಿಮ್ಮ ವ್ಯಕ್ತಿತ್ವವನ್ನು ಪ್ರೀತಿಸುತ್ತೇನೆ. ನಿಮ್ಮೊಂದಿಗೆ ನಾನು ಕಳೆಯುತ್ತಿರುವ ಪ್ರತಿ ಕ್ಷಣವೂ ಅಮೂಲ್ಯವಾದುದ್ದು. ನಾನು ಪ್ರತಿ ಸೆಕೆಂಡ್ ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಭಾವಿ ಪತ್ನಿ ಬಗ್ಗೆ ನಿಖಿಲ್ ಇನ್ಸ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Related