ಲಾಕ್ ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ

  • In State
  • April 20, 2020
  • 480 Views
ಲಾಕ್ ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ

ಹಾಸನ, ಏ.20 : ಲಾಕ್ ಡೌನ್ ಸಂಬಂಧ ಸರಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಕಠಿಣ ಕ್ರಮ ಕೈಗೊಂಡರು ಪುಂಡ ಯುವಕರು ಪ್ರತಿದಿನ ರಸ್ತೆಗಿಳಿಯುವುದು ಸಾಮಾನ್ಯವಾಗಿದೆ. ಇವರಿಗೆ ಇಂದು ವಿಶೇಷ ರೀತಿಯಲ್ಲಿ ಹಾಸನ ನಗರದ ಪೊಲೀಸರು ಶಿಕ್ಷೆ ವಿಧಿಸಿದರು. ನಗರದ ಡೈರಿ ವೃತ್ತದಲ್ಲಿ ಯಾವುದೇ ಪಾಸ್ ಹಾಗೂ ಅನುಮತಿ ಇಲ್ಲದೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಯುವ ಸವಾರರಿಗೆ ಬಸ್ಕಿ ಹೊಡೆಸಿದ ಪೊಲೀಸರು ದಂಡ ವಿಧಿಸಿ ವಾಹನ ವಶಕ್ಕೆ ಪಡೆದು ಮನೆಗೆ ಕಳುಹಿಸಿದ್ದಾರೆ. ಹಾಸನ ನಗರದ ಬಹುತೇಕ ಕಡೆ ಬ್ಯಾರಿಕೆಡ್ ನಿರ್ಮಾಣ ಮಾಡಿದ್ದು ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನ ಸವಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Related