ಆರ್.ಪಿ.ಐ ಅಂಬೇಡ್ಕರ್ ಪಕ್ಷದಿಂದ ಸ್ಪರ್ಧಿಸುವ 10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಆರ್.ಪಿ.ಐ ಅಂಬೇಡ್ಕರ್ ಪಕ್ಷದಿಂದ ಸ್ಪರ್ಧಿಸುವ 10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕದಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಆರ್.ಪಿ.ಐ ಅಂಬೇಡ್ಕರ್ ಪಕ್ಷದಿಂದ ಸ್ಪರ್ಧಿಸುವ 10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ಅವರು, ಸಂವಿಧಾನ ಶಿಲ್ಪಿ ಪ್ರಜಾಪ್ರಭುತ್ವದ ಪಿತಾಮಹ, ಭಾರತೀಯ ಪ್ರತಿಯೊಬ್ಬ ನಾಗರಿಕನಿಗೆ ಮತದಾನದ ಹಕ್ಕು ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ರವರ ತತ್ವ ಸಿದ್ದಾಂತ, ಮತ್ತು ಆಶಯದಂತೆ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ರಾಜಕೀಯ ಅಧಿಕಾರ ಅತ್ಯವಶಕವಾಗಿದ್ದು ಹಾಗಾಗಿ ಅವರ ಕನಸಿನ ಕೂಸಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದಿಂದ ಕರ್ನಾಟಕದಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕಿಳಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೀಪಕ್ ಭಾವು ನಿಕಾಳಜಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಮೋಹನಲಾಲ್ ಪಾಟೀಲ್ ರವರ ಆದೇಶದಂತೆ ತಿರ್ಮಾನಿಸಲಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಒಂದು ನಾಣ್ಯದ ಎರಡು ಮುಖಗಳಾಗಿವೆ ಕಾಂಗ್ರೆಸ್ ಸುಮಾರು 65 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದೆ ಆದರೆ ಸಂವಿಧಾನ ಸಂಪೂರ್ಣ ಜಾರಿ ಮಾಡಿರುವುದಿಲ್ಲ ಅದೆ ಮಾರ್ಗದಲ್ಲಿ ಮುಂದುವರಿದ ಬಿಜೆಪಿ ಸಂವಿಧಾನವನ್ನ ಬದಲಾಯಿಸುವ ಮಾತನಾಡುತ್ತಿದ್ದ ಸರ್ಕಾರಗಳು ಸಂವಿಧಾನದ ಸದಾಶಯದ ವಿರುದ್ಧ ನಡೆದುಕೊಳ್ಳುತ್ತಿವೆ ನಿರುದ್ಯೋಗಿಗಳಿಗೆ, ಕಾರ್ಮಿಕರಿಗೆ,ಮಹಿಳೆಯರಿಗೆ ಶೋಷಿತರಿಗೆ ಮತ್ತು ದಿನದಲಿತರಿಗೆ ಉದ್ಯೋಗ, ನಾಗರಿಕರಿಗೆ ಭೂಮಿ ಸಮಾನ ಹಂಚಿಕೆ, ಬಡತನ ನಿರ್ಮೂಲನೆ, ಅಸ್ಪೃಶ್ಯತೆ ನಿರ್ಮೂಲನೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಮಾನತೆ ನೀಡುವುದು ಮರೆತು ಜಾತಿ ರಾಜಕಾರಣ, ಪವರ್ ಪಾಲಿಟಿಕ್ಸ್ ಮಾಡುತ್ತಿವೆ ಭಾರತವು ಶಾಂತಿ ಸೌಹಾರ್ದತೆ, ಬಂಧುತ್ವದ ಮತ್ತು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಬುದ್ಧ ಬಸವ ಅಂಬೇಡ್ಕರ್ ತತ್ವದ ಮೇಲೆ ನಿಂತ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಂಬೇಡ್ಕರ್ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಸಾಧ್ಯ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ ಅಭ್ಯರ್ಥಿಗಳ ಮೊದಲನೆ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ ಎಂದುರಾಜ್ಯ ಪ್ರಧಾನ ಕಾರ್ಯದರ್ಶಿ ಹೆಬ್ಬಾಳ ವೆಂಕಟೇಶ ತಿಳಿಸಿದರು.

Related