ವಿದ್ಯಾರ್ಥಿಯ ಬ್ಯಾಗ್ ನಲ್ಲಿ ಮದ್ಯದ ಸೀಸೆ..!

ವಿದ್ಯಾರ್ಥಿಯ ಬ್ಯಾಗ್ ನಲ್ಲಿ ಮದ್ಯದ ಸೀಸೆ..!

ವಿದ್ಯಾರ್ಥಿಯೊಬ್ಬ ಶಾಲೆಗೆ ಮನೆಯಲ್ಲೇ ತಯಾರಿಸಿದ ಮದ್ಯ ತೆಗೆದುಕೊಂಡುಬಂದಿದ್ದ. ಆದರೆ ಆತ ಅಂದುಕೊಳ್ಳದ ಘಟನೆಯೊಂದು ನಡೆದಿತ್ತು. ಏನಾಯ್ತು? ನಂತರದ ಫಜೀತಿ ಕೇಳಬೇಕಾ?

ತಿರುವನಂತಪುರಂ, ಜು 15 : ದೇಶದ ವಿವಿಧ ಭಾಗಗಳಲ್ಲಿ ನಾಟಿ ಮದ್ಯ ಫೇಮಸ್. ಕರ್ನಾಟಕ ಕೊಡಗಿನಲ್ಲಿ ಹಣ್ಣು, ಹೂವಿನ ರುಚಿಯಾದ ವೈನ್ ತಯಾರಿಸಿದ ಹಾಗೆಯೇ ಆಯಾ ಪ್ರದೇಶಗಳಲ್ಲಿ ಲಭ್ಯವಿರುವಂತಹ ಹಣ್ಣು, ತರಕಾರಿ, ಹೂಗಳನ್ನು ಬಳಸಿ ಮನೆಯಲ್ಲಿಯೇ ಮದ್ಯ ತಯಾರಿಸುವ ಬಹಳಷ್ಟು ಮಂದಿ ಇದ್ದಾರೆ. ಕೇರಳದ ಕೆಲವು ಭಾಗಗಳಲ್ಲಿ ದೇಸಿ ಮದ್ಯ ಫೇಮಸ್. ಆದರೆ ಇದು ಅಕ್ರಮ.

ಮದ್ಯವನ್ನು ತಯಾರಿಸಿ ಮಾರಾಟ ಮಾಡುವ ಹಾಗಿಲ್ಲ. ತಯಾರಿಸುವ ಹಾಗೆಯೇ ಇಲ್ಲ. ಆದರೆ ಬಹಳಷ್ಟು ಜನರು ಸ್ವಂತ ಬಳಕೆಗಾಗಿ ಮದ್ಯ ತಯಾರಿಸುತ್ತಾರೆ. ಇದೀಗ ಕೇರಳದಲ್ಲಿ ಒಂದು ಘಟನೆ ನಡೆದಿದ್ದು ಘಟನೆ ಬಗ್ಗೆ ನಗಬೇಕೋ, ಕೋಪ ಮಾಡಬೇಕೋ ಒಂದೂ ಗೊತ್ತಾಗದಂತಿದೆ. ವಿದ್ಯಾರ್ಥಿ ಸ್ಕೂಲ್​ ಬ್ಯಾಗ್​ನಲ್ಲಿ ಮದ್ಯದ ಬಾಟಲಿ ತೆಗೆದುಕೊಂಡು ಬಂದಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮನೆಯಲ್ಲಿ ತಯಾರಿಸಿದ ಮದ್ಯ ಅತಿಯಾದ ಘಾಟು ಹಾಗೂ ಗ್ಯಾಸ್ ಹೊಂದಿರುವ ಕಾರಣ ಇದರ ಹನಿ ಸಿಕ್ಕಿದರೂ ಸಿಕ್ಕಿಬೀಳುವುದು ಭಾರೀ ಸುಲಭ. ಹಾಗಾಗಿಯೇ ರೈಡ್​ಗಳಾದಾಗ ಯಾರಿಗೂ ತಿಳಿಯದಿರಲು ಬಹಳಷ್ಟು ಕಡೆಗಳಲ್ಲಿ ಕಳ್ಳಭಟ್ಟಿ ಮಣ್ಣಿನಡಿಗೆ ಹೂತಿಡಲಾಗುತ್ತದೆ.

Related