ಕಾಂಗ್ರೆಸ್ ಸರ್ಕಾರಕ್ಕೆ ಸಾಲು ಸಾಲು ಪತ್ರ ಕಳಂಕ!

ಕಾಂಗ್ರೆಸ್ ಸರ್ಕಾರಕ್ಕೆ ಸಾಲು ಸಾಲು ಪತ್ರ ಕಳಂಕ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಕಂಡು ಬರುತ್ತಿದ್ದು ಇದರಲ್ಲಿ ಭ್ರಷ್ಟಾಚಾರದ ಆರೋಪಗಳು ದಿನ ದಿನ ಹೆಚ್ಚಾಗುತ್ತಿರುವುದರಿಂದ ಜನಾಕ್ರೋಶ ಹೆಚ್ಚಾಗುತ್ತಿದೆ.

ಹೌದು, ಕಾಗ್ರೆಸ್ ಸರ್ಕಾರದಲ್ಲಿ ಸಾಲು ಸಾಲು ಭ್ರಷ್ಟಾಚಾರ ಆರೋಪಗಳಿಂದ ಗ್ಯಾರಂಟಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಡ್ಯಾಮೇಜ್ ಕಂಟ್ರೋಲ್ ಗೆ ಸಿಎಂ, ಡಿಸಿಎಂ ಸಿಐಡಿ ತನಿಖೆಗೆ ಆದೇಶ ನೀಡಿದ್ರೂ, ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದೆ‌. ಕೃಷಿ ಇಲಾಖೆಯಲ್ಲಿನ ಕಮಿಷನ್ ವ್ಯವಹಾರ ರಾಜ್ಯಪಾಲರ ಅಂಗಳಕ್ಕೆ ತಲುಪಿದ್ರೆ, ಗುತ್ತಿಗೆದಾರರಿಂದ ಪರ್ಸೆಂಟೇಜ್ ವಸೂಲಿ ಮಾಡ್ತಿರೋದು, ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ಹೋಗಿದೆ.

ವರ್ಗಾವಣೆ ದಂಧೆ, ಶಾಸಕರ ಅಸಮಧಾನ ಪತ್ರ, ಗುತ್ತಿಗೆದಾರರಿಂದ ಕಮೀಷನ್ ವಸೂಲಿ ಆರೋಪಗಳ ಸುಳಿಯಲ್ಲಿ ಗ್ಯಾರಂಟಿ ಸರ್ಕಾರ ಸಿಲುಕಿಕೊಂಡಿದೆ. ಇದ್ರ ಬೆನ್ನಲ್ಲೇ ಕೃಷಿ ಸಚಿವರ ವಿರುದ್ಧ ಅಧಿಕಾರಿಗಳು ಬರೆದಿದ್ದಾರೆ ಎನ್ನಲಾದ ಪತ್ರದಿಂದ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ. ಲೆಟರ್ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಸಿಎಂ ಆದೇಶ ನೀಡಿದ್ರೂ, ಡ್ಯಾಮೇಜ್ ಕಂಟ್ರೋಲ್ ಆಗಿಲ್ಲ. ಇದನ್ನೇ ದಳ ಹಾಗೂ ಕಮಲ ಪಡೆ ಬ್ರಹ್ಮಾಸ್ತ್ರ ಮಾಡಿಕೊಂಡು, ಮುಗಿ ಬೀಳ್ತಿವೆ.

ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳಿಂದ ತಲಾ 6 ರಿಂದ 7 ಲಕ್ಷ ಹಣ ಕೊಡಬೇಕೆಂದು ಸಚಿವರು ಡಿಮ್ಯಾಂಡ್ ಮಾಡ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿ, ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ದೂರಿನ ಪರಿಶೀಲನೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ  ರಾಜ್ಯಪಾಲರು ಸೂಚನೆ ನೀಡಿದ್ರು. ಈ ಬೆನ್ನಲ್ಲೇ ಕೃಷಿ ಸಚಿವ ಚೆಲುವರಾಯಸ್ವಾಮಿ ರಾಜಭವನಕ್ಕೆ ಭೇಟಿ ನೀಡಿ ಗವರ್ನರ್ ಜೊತೆ ಮಾತುಕತೆ ನಡೆಸಿದರು.

 

Related