ಮಹೇಶ್ ಸಿನಿಮಾಗಳಲ್ಲಿ ಇಷ್ಟವಿಲ್ಲದೆ ನಟಿಸಿದ್ದರಂತೆ..

  • In Cinema
  • July 20, 2022
  • 261 Views
ಮಹೇಶ್ ಸಿನಿಮಾಗಳಲ್ಲಿ ಇಷ್ಟವಿಲ್ಲದೆ ನಟಿಸಿದ್ದರಂತೆ..

ಪ್ರಕಾಶ್ ರಾಜ್ ಅಭಿನಯದ ಬಗ್ಗೆ ಯಾರೂ ಚಕಾರ ಎತ್ತುವಂತೆಯೇ ಇಲ್ಲ. ದಕ್ಷಿಣ ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ನಟರಲ್ಲಿ ಕನ್ನಡದ ಪ್ರಕಾಶ್ ರಾಜ್ ಕೂಡ ಒಬ್ಬರು. ಕನ್ನಡಕ್ಕಿಂತ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಪ್ರಕಾಶ್ ಇತ್ತೀಚೆಗೆ ಸಂರ್ಶನದಲ್ಲಿ ಒಂದು ಹೇಳಿಕೆ ನೀಡಿದ್ದಾರೆ.


ಪ್ರಕಾಶ್ ಕೆಲವೊಮ್ಮೆ ಭಾರವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದೂ ಇದೆ. ಅದು ಕೆಲವರಿಗೆ ಇಷ್ಟ ಆಗುತ್ತೆ ಮತ್ತೆ ಕೆಲವರಿಗೆ ಇಷ್ಟ ಆಗುವುದಿಲ್ಲ. ಕಾಮಿಡಿ ಪಾತ್ರದಲ್ಲೂ, ಖಳನಾಯಕ ಪಾತ್ರದಲ್ಲಿಯೂ ಪ್ರಕಾಶ್ ರಾಜ್ ಇಷ್ಟ ಆಗುತ್ತಾರೆ. ಆದರೆ, ಇತ್ತೀಚೆಗೆ ಪ್ರಕಾಶ್ ರಾಜ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.


ಇತ್ತೀಚೆಗೆ ಪ್ರಕಾಶ್ ರಾಜ್ ತಮಗೆ ಇಷ್ಟವಿಲ್ಲದೆ ಒಂದು ಸಿನಿಮಾದಲ್ಲಿ ನಟಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಸಿನಿಮಾದಲ್ಲಿ ಇಷ್ಟವಿಲ್ಲದೆ ನಟಿಸಿದ್ದೆ ಎಂದು ಪ್ರಕಾಶ್ ರಾಜ್ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

Related