ಭಯ ಬಿಟ್ಟು ಲಸಿಕೆ ಪಡೆಯೋಣ

ಭಯ ಬಿಟ್ಟು ಲಸಿಕೆ ಪಡೆಯೋಣ

ಚಿಂಚೋಳಿ: ತಾಲ್ಲೂಕಿನ ಬೆನಕೆಪಳ್ಳಿ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ನಡೆದ ಆರೋಗ್ಯ ಇಲಾಖೆಯ ಕೋವಿಡ್ ಲಸಿಕೆ ಶಿಬಿರದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ವೀರಶೆಟ್ಟಿ ಹಳ್ಳಿ ಐನಾಪುರ ಮಾತನಾಡುತ್ತ, ಈಗಾಗಲೇ ಲಸಿಕೆ ಪಡೆದ ಒಬ್ಬರು ಒಂದು ನೂರು ಜನಕ್ಕೆ ಲಸಿಕೆ ಕೊಡಿಸಲು ಪಣ ತೊಟ್ಟು ಚಿಂಚೋಳಿ ತಾಲ್ಲೂಕ ಶೇ 100% ರಷ್ಟು ಲಸಿಕೆ ಮಾಡಿಸೋಣ ಈ ನಿಟ್ಟಿನಲ್ಲಿ ಎಲ್ಲ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಮುಂದೆ ಬಂದು ಸಹಕರಿಸಿದರೆ ಕೆಲಸ ಕಷ್ಟವೆನಿಲ್ಲ ಎಂದರು.

ಭಾರತ ದೇಶದಲ್ಲಿ ಮೊದಲ ಡೋಸ್ ಲಸಿಕೆಯನ್ನು ಪಡೆದ ಎಲ್ಲ ರಾಜ್ಯಗಳಲ್ಲೂ ಕರ್ನಾಟಕ ನಾಲ್ಕನೆಯ ಸ್ಥಾನವನ್ನು ಪಡೆದಿದೆ. ಮುಂಬರುವ ದಿನಗಳಲ್ಲಿ ಒಂದನೇ ಸ್ಥಾನಕ್ಕೆ ಮುಟ್ಟಲು ಕರೆ ಕೊಟ್ಟರು.
ಮೊದಲ ಡೋಸ್ ಲಸಿಕೆ ಪಡೆದ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಶೇ57.1 ರಷ್ಟು ಪಡೆದಿದ್ದು ನಾಲ್ಕನೇ ಸ್ಥಾನದಲ್ಲಿದೆ. ಗೋವಾ ರಾಜ್ಯ ಶೇ 78.1 ರಷ್ಟು ಪಡೆದಿದ್ದು ಒಂದನೇ ಸ್ಥಾನದಲ್ಲಿದೆ. ನಾವೆಲ್ಲ ಜಾಗೃತರಾಗಿ ಭಯ ಬಿಟ್ಟು ಲಸಿಕೆ ಪಡೆಯೋಣ ಎಂದರು.

ಶಿಬಿರದಲ್ಲಿ ಬೆನಕೆಪಳ್ಳಿ ಗ್ರಾಮದ ಮುಖಂಡರಾದ ಚಂದ್ರಶೇಟ್ಟಿ ಯಲಾಲ್, ಶರಣಪ್ಪ ವಾಲಿಕರ್, ಹಣಮಂತ ಸುತಾರ್, ಮಾರುತಿ ಭೂತಾಳೆ, ಸಂತೋಷರೆಡ್ಡಿ ಹುಣಚಗೇರಾ, ದಯಾನಂದ ಸ್ವಾಮಿ, ಅಶೋಕ್ ಹುಣಚಗೇರಾ, ಪ್ರಾಥಮಿಕ ಆರೋಗ್ಯ ಕೇಂದ್ರ ಐನಾಪುರ ಸಿಬ್ಬಂದಿ, ಆಶಾ, ಅಂಗನವಾಡಿ ಸಿಬ್ಬಂದಿ ಇದ್ದರು.

Related