ಎಲ್ಲರೂ ಒಗ್ಗಟ್ಟಾಗಿ ಸಂಗೀತ ಸಮ್ಮೇಳ ಜರುಗಲಿ

ಎಲ್ಲರೂ ಒಗ್ಗಟ್ಟಾಗಿ ಸಂಗೀತ ಸಮ್ಮೇಳ ಜರುಗಲಿ

ಗಂಗಾವತಿ : ಕಲೆ, ಸಂಸ್ಕೃತಿ, ಸಾಹಿತ್ಯದ ತವರೂರು ಎನಿಸಿಕೊಂಡಿರುವ ಗಂಗಾವತಿಯಲ್ಲಿ, ಸಂಗೀತ ಸಮ್ಮೇಳನ ಜರುಗಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಧ್ಯಮ ಪ್ರತಿನಿಧಿ ರಾಮಮೂರ್ತಿ ನವಲಿ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಗದಗೆಪ್ಪ ಕಾಲೋನಿಯ ಗಣೇಶ ದೇವಸ್ಥಾನದ ಸಮುದಾಯ ಭವನದಲ್ಲಿ ಶಕುಂತಲ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿದ ಸಂಗೀತ ಸಂಸ್ಥೆಗಳಿದ್ದು ಎಲ್ಲರೂ ಒಗ್ಗಟ್ಟಾಗಿ ಸಂಗೀತ ಸಮ್ಮೇಳನ ನಡೆಸಲು ಮುಂದಾಗಿ ಮತ್ತು ಮಕ್ಕಳಿಗೆ ಸಂಗೀತ ಶಿಕ್ಷಣ ಕೊಡಿಸಿರಿ ಎಂದರು.

ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಅಶೋಕ ರಾಯ್ಕರ್, ಸಂಸ್ಥೆ ಅಧ್ಯಕ್ಷ ವೆಂಕಟೇಶ ದಾಸನಾಳ, ಗಂಗಾಧರಸ್ವಾಮಿ, ರಾಜಾಸಾಬ ಮುದ್ದಾಬಳ್ಳಿ, ಅಧ್ಯಕ್ಷೆ ನಿರ್ಮಲ ವೆಂಕಟೇಶ ದಾಸನಾಳ, ಗಾಯಕ ಗಂಗಾಧರಸ್ವಾಮಿ, ಗಾಯಕರಾದ ಸಿ.ಮಹಾಲಕ್ಮೀ, ಕೇಸರಹಟ್ಟಿ, ಕುಮಾರಿ ಸುಮೇಧ ಹರೀಶ್ ಕುಲಕರ್ಣಿ ಸಂಗಡಿಗರ, ಗಂಗಾಧರ ಸ್ವಾಮಿ, ರಿಜ್ವಾನ್ ಮುದ್ದಾಬಳ್ಳಿ, ಹರೀಶ್ ಕುಲಕರ್ಣಿ, ವೆಂಕಟೇಶ್ ದಾಸನಾಳ, ವೆಂಕಟೇಶ್ ದಾಸನಾಳ ಸೇರಿದಂತೆ ಗಾಯಕರಿಂದ ಸಂಗೀತ ಕಾರ್ಯಕ್ರಮ ಜರುಗಿತು.

Related