ಕುಟುಂಬದವರೊಂದಿಗೆ ಶಾಸಕ ಮತದಾನ

ಕುಟುಂಬದವರೊಂದಿಗೆ ಶಾಸಕ ಮತದಾನ

ಜೇವರ್ಗಿ : ತಾಲೂಕಿನ ನೆಲೋಗಿ ಗ್ರಾಮದಲ್ಲಿ ಶಾಸಕ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ತಾಯಿ ಪ್ರಭಾವತಿ ಧರ್ಮಸಿಂಗ್ ಮತದಾನ ಮಾಡಿದರು.

ಈ ವೇಳೆ ಸೊನ್ನ, ಕಲ್ಲ ಹಂಗರಗಿ, ನೆಲೋಗಿ ಗ್ರಾಮ ಪಂಚಾಯಿತಿಯ ಮತಗಟ್ಟೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಕುಶಲೋಪರಿ ವಿಚಾರಿಸಿದರು. ಚುನಾವಣೆ ಅಧಿಕಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಶಾಂತಿಯುತವಾಗಿ ಮತದಾನ ನೆರವೇರಿಸಿ ಕೊಡಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ, ಮುಖಂಡರು, ಕಾರ್ಯಕರ್ತರು, ಚುನಾವಣಾ ಅಭ್ಯರ್ಥಿಗಳು ಉಪಸ್ಥಿತರಿದ್ದರು.

Related