ಗುಣಮಟ್ಟದ ಸದ್ಭವನ ನಿರ್ಮಿಸಲು ಶಾಸಕರು ತಾಕೀತು

ಗುಣಮಟ್ಟದ ಸದ್ಭವನ ನಿರ್ಮಿಸಲು ಶಾಸಕರು ತಾಕೀತು

ಗಂಗಾವತಿ : ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಭಾನುವಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಇಲಾಖೆಯ ವತಿಯಿಂದ 2018-19ನೇ ಸಾಲಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಸದ್ಭಭವನ ಕಟ್ಟಡವನ್ನು ಸುಮಾರು 1.20 ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳಲ್ಲಿ ನಿರ್ಮಿಸಲು ಎಂದು ಸ್ಥಳೀಯ ಶಾಸಕರಾದ ಪರಣ್ಣ ಮನವಳ್ಳಿ ಅವರು ಪೂಜೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಶಾಸಕರಾದ ಪರಣ್ಣ ಮುನವಳ್ಳಿ ಅವರು ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಕಳಪೆ ಮಟ್ಟದ ಕಾಮಗಾರಿಯನ್ನು ಮಾಡಬೇಡಿ, ಇದು ನಿಮ್ಮ ಊರು ನಿಮ್ಮ ಭವನ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಬೇಕು ಮತ್ತು ಕಾಮಗಾರಿಯನ್ನು ಪೂರ್ಣಗೊಳಿಸುವ ಅವಧಿಗೆ ಮುನ್ನವೇ ಸದ್ಭವನವನ್ನು ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ನಿಗಮದ (ಕಾಡಾ) ಅಧ್ಯಕ್ಷರಾದ ತಿಪ್ಪೇರುದ್ರ ಸ್ವಾಮಿ, ತಾ.ಪಂ.ಅಧ್ಯಕ್ಷರಾದ ಮಹಮ್ಮದ್ ರಫೀ, ನಗರಸಭೆ ಸದಸ್ಯರಾದ ವಾಸುದೇವ ನವಲಿ, ಮುಖಂಡರಾದ ಚಂದ್ರಪ್ಪ ಉಪ್ಪಾರ, ವಿಠಪ್ಪ, ಸರ್ಕಾರಿ ಉರ್ದ ಪ್ರೌಢ ಶಾಲೆಯ ಸದಸ್ಯರಾದ ಗಿರಿಜಮ್ಮ ವಿಠಪ್ಪ ತಳಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related