ದೊಡ್ಡಣ್ಣ ಅಮೆರಿಕಗೆ ಕೊರೊನಾ

ದೊಡ್ಡಣ್ಣ ಅಮೆರಿಕಗೆ ಕೊರೊನಾ

ನ್ಯೂಯಾರ್ಕ್, ಮಾ. 31 : ಕೊರೊನಾ ವೈರಸ್ ಸೋಂಕಿಗೆ ಅಮೆರಿಕ ತತ್ತರಿಸಿದೆ. ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆ ಹೊಂದಿದ್ದರೂ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 3,000ಕ್ಕೆ ಏರಿಕೆಯಾಗುವ ಮೂಲಕ ಆತಂಕ ಹೆಚ್ಚಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 30 ದಿನಗಳ ವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂದುವರಿಸುವಂತೆ ಸೂಚಿಸಿದ್ದರು.
ಕೋವಿಡ್–19 ದೃಢಪಟ್ಟ ಪ್ರಕರಣಗಳು 1,63,000 ದಾಟಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಒಂದೇ ದಿನ ಕನಿಷ್ಠ 540 ಮಂದಿ ಸಾವಿಗೀಡಾಗುವ ಮೂಲಕ ಮೃತರ ಸಂಖ್ಯೆ 3,017 ತಲುಪಿದೆ. ಕ್ರೀಡಾಂಗಣಗಳು, ರೇಸ್ ಟ್ರ್ಯಾಕ್ಗಳಲ್ಲಿ ಸೇನೆ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆದಿದೆ.
ತುರ್ತು ಚಿಕಿತ್ಸೆಗಳಿಗಾಗಿ ಅಮೆರಿಕದ ನೌಕಾಪಡೆಯ ಹಡಗು ನಿಯೋಜಿಸಲಾಗಿದ್ದು, ನೌಕೆ 1,000 ಹಾಸಿಗೆಗಳನ್ನು ಒಳಗೊಂಡಿದೆ. ನ್ಯೂಯಾರ್ಕ್ ಮತ್ತು ನ್ಯೂ ಜೆರ್ಸಿಯಲ್ಲಿ ಜನರು ಹಡ್ಸನ್ ನದಿಯ ಎರಡೂ ಬದಿಗಳಲ್ಲಿ ನಿಂತು ನೌಕೆಯನ್ನು ಸ್ವಾಗತಿಸಿದ್ದಾರೆ. ಬಿಳಿಯ ಬಣ್ಣ ಮತ್ತು ರೆಡ್ ಕ್ರಾಸ್ಗಳನ್ನು ಹೊದ್ದಿರುವ ನೌಕೆ ಸ್ಟ್ಯಾಚು ಆಫ್ ಲಿಬರ್ಟಿ ಸಮೀಪ ಹಾದು ಹೋಗಿದೆ. ನ್ಯೂಯಾರ್ಕ್ನಲ್ಲಿ ಆಸ್ಪತ್ರೆಗಳು ಕೊರೊನಾ ವೈರಸ್ ಸೊಂಕಿತರಿಂದ ತುಂಬಿ ಹೋಗಿದೆ. ಸ್ವಯಂ ಪ್ರೇರಿತರಾಗಿ ಆರೋಗ್ಯ ಸೇವೆಗಳಲ್ಲಿ ಸಹಕರಿಸಲು ಬರುವಂತೆ ಕೋರಲಾಗಿದೆ.

Related