ಮೃತ ನೇಹಾ ಕುಟುಂಬಕ್ಕೆ ಭೇಟಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

ಮೃತ ನೇಹಾ ಕುಟುಂಬಕ್ಕೆ ಭೇಟಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

ಹುಬ್ಬಳ್ಳಿಯ: ಹುಬ್ಬಳ್ಳಿ ನಗರದಲ್ಲಿರುವ ವಿಬಿವಿ ಕಾಲೇಜಿನಲ್ಲಿ ಓದುತ್ತಿರುವ ನೆಹ ಎಂಬ ಯುವತಿಯನ್ನು ಯುವಕನ ಕೊಲೆ ಮಾಡಿದ್ದಕ್ಕೆ ಇಡೀ ರಾಜ್ಯದ ಜನತೆಯೇ ಬೆಚ್ಚಿ ಬಿದ್ದಿತ್ತು.

ಇನ್ನು ನೇಹಾ ಸಾವಿಗೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಹಲವು ಸಂಘ ಸಂಸ್ಥೆಗಳು ಹೋರಾಟ ನಡೆಸಿದ್ದು ಫಯಾಜ್ ನನ್ನು ನಮ್ಮ ಕೈಗೆ ಕೊಡಿ ಅಥವಾ ಶೂಟ್ ಔಟ್ ಮಾಡಿ ಎಂದು ಸಾರ್ವಜನಿಕರು ಫಯಾಜ್ ಮೇಲೆ ಕೆಂಡಮಂಡಲವಾಗಿದ್ದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ನಿರಂಜನ ಹಿರೇಮಠ್ ಅವರ ಮಗಳ ಹತ್ಯೆಯ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ಅವರ ನಿವಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಮಗಳನ್ನು ಕಳೆದುಕೊಂಡು, ನೋವಿನಲ್ಲಿರುವ ತಂದೆ-ತಾಯಿಗೆ ಭಗವಂತ ನೋವು ಸಹಿಸುವ ಶಕ್ತಿ‌ ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಮಯದಲ್ಲಿ ಹುಬ್ಬಳ್ಳಿ ಪೋಲಿಸ್ ಆಯುಕ್ತರಾದ ರೇಣುಕಾ ಶಶಿಕುಮಾರ್, ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ್, ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಮೋಹನ್ ಲಿಂಬಿಕಾಯಿ, ಬಂಗಾರೇಶ್ ಹಿರೇಮಠ್, ರಾಜಶೇಖರ್ ಮೆಣಸಿನಕಾಯಿ ಹಾಗೂ ಅನೇಕರು ಇದ್ದರು.

Related