ಕುಂಬ್ಳೆ 10 ವಿಕೆಟ್ ಸಾಧನೆಗೆ 21 ವರ್ಷ!

ಕುಂಬ್ಳೆ 10 ವಿಕೆಟ್ ಸಾಧನೆಗೆ 21 ವರ್ಷ!

ನವದೆಹಲಿ, ಫೆ. 07 : ಭಾರತ ತಂಡದ ಮಾಜಿ ಸ್ಪಿನ್ನರ್, ಮಾಜಿ ಕೋಚ್ ಅನಿಲ್ ಕುಂಬ್ಳೆ ಪಾಕ್ ವಿರುದ್ಧ 10 ವಿಕೆಟ್ ಸಾಧನೆ ನಮ್ಮ ನೆನಪಿಗೆ ಬರುತ್ತದೆ. ಕನ್ನಡಿಗ, ಸ್ಪಿನ್ ದಿಗ್ಗಜನ ಸಾಧನೆಗೆ 21 ವರ್ಷಗಳು ತುಂಬಿದೆ. 1999ರ ಫೆ 7 ರಂದು ಇಲ್ಲಿನ ಫಿರೋಜ್ ಶಾ ಕೋಟ್ಲಾ (ಈಗಿನ ಅರುಣ್ ಜೆಟ್ಲಿ ಮೈದಾನ) ಕ್ರೀಡಾಂಗಣದಲ್ಲಿ ಅನಿಲ್ ಕುಂಬ್ಲೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಕಿತ್ತು ಸಾಧನೆ ಮಾಡಿದ್ದರು. ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡಿದ್ದರು. ಇದಕ್ಕೂ ಮುನ್ನ ಜಿಕ್ ಲ್ಯಾಕರ್ ಈ ಸಾಧನೆ ಮಾಡಿದ್ದರು.
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲನೇ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು ಸೋಲು ಅನುಭವಿಸಿತ್ತು. ದೆಹಲಿ ಪಂದ್ಯದಲ್ಲಿ ಸರಣಿ ಸಮಬಲ ಸಾಧಿಸಲು ಟೀಮ್ ಇಂಡಿಯಾಗೆ ಗೆಲುವು ಅನಿವಾರ್ಯವಾಗಿತ್ತು. ಈ ವೇಳೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಭಾರತದ ಬ್ಯಾಟಿಂಗ್ ವಿಭಾಗ ಪಾಕಿಸ್ತಾನಕ್ಕೆ 420 ರನ್ ಗುರಿ ನೀಡಿತ್ತು.

Related