ಮತ್ತೆ ವಿದೇಶಕ್ಕೆ ಹಾರಿದ ಕುಮಾರಸ್ವಾಮಿ

ಮತ್ತೆ ವಿದೇಶಕ್ಕೆ ಹಾರಿದ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಮೊನ್ನೇ ಅಷ್ಟೇ ಕುಟುಂಬದ ಜೊತೆ ಯುರೋಪ್ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದರು. ಆದರಿಗ ಮತ್ತೆ ವಿದೇಶಕ್ಕೆ ಹಾರಿದ್ದಾರೆ.

ಹೌದು, ಕಳೆದ ತಿಂಗಳಲ್ಲಿ ಕುಟುಂಬ ಸಮೇತರಾಗಿ ಯುರೋಪ್ ಪ್ರವಾಸಕ್ಕೆ ತೆರಳಿದ್ದ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ, ಈಗ ಮತ್ತೆ ಸಿಂಗಾಪುರಕ್ಕೆ ತೆರಳಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಆಪ್ತರ ಜೊತೆಗೆ ಮಲೇಶಿಯಾದ ಕೌಲಾಲಂಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಕುಮಾರಸ್ವಾಮಿ ಸೇರಿದಂತೆ ಒಟ್ಟು 5 ಜನ ನಿನ್ನೆ ರಾತ್ರಿ 12 ಗಂಟೆಯ ವಿಮಾನದಲ್ಲಿ ಮಲೇಶಿಯಾದ ಕೌಲಾಲಂಪುರಕ್ಕೆ ತೆರಳಿದ್ದಾರೆ. ಇನ್ನು ಈ ಬಾರಿಯ ವಿದೇಶ ಪ್ರವಾಸಕ್ಕೆ ಕುಮಾರಸ್ವಾಮಿಗೆ ಮಾಜಿ ಸಚಿವ ಸಾರಾ ಮಹೇಶ್, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಸಾಥ್ ನೀಡಿದ್ದಾರೆ. ಕುಮಾರಸ್ವಾಮಿ ಅವರು ಈ ವಿದೇಶ ಪ್ರಯಾಣ ತೀವ್ರ ಕುತೂಹಲ ಮೂಡಿಸಿದೆ.

 

Related