ಕೊರೋನಾ: ಕುಗ್ಗಿದ ವ್ಯಾಪಾರ

ಕೊರೋನಾ: ಕುಗ್ಗಿದ ವ್ಯಾಪಾರ

ಮುಂಡರಗಿ: ಪಟ್ಟದ ಗೌರಿ ಗಣೇಶ ಹಬ್ಬದ ವಾತಾವರಣ ಮಾರುಕಟ್ಟೆಯಲ್ಲಿ ಶುಕ್ರವಾರ ಕಂಡು ಬರಲಿಲ್ಲ. ಹೂ-ಹಣ್ಣು ಖರೀದಿ ನಡೆದಿತ್ತಾದರೂ ಹಿಂದಿನ ಭರಟೆ ನಿರೀಕ್ಷೆಯಷ್ಟು ಗ್ರಾಹಕರು ಬಾರದೆ ವ್ಯಾಪಾರಸ್ತರ ಮುಖದಲ್ಲಿ ಮಂದಹಾಸ ಮಾಯವಾಗಿದೆ.

ಕೋವಿಡ್ ನೆರಳು ಹಬ್ಬದ ಆಚರಣೆ ಮೇಲೂ ಬಿದ್ದಂತಿದ್ದು, ಮಾರುಕಟ್ಟೆಯಲ್ಲಿ ಕಳೆದ ವರ್ಷದಷ್ಟು ಈ ವರ್ಷ ಸಂಭ್ರಮ ಕಾಣಲಿಲ್ಲ. ಬೇಡಿಕೆಯೇ ಇಲ್ಲದ ಕಾರಣ ಹೂ ಹಣ್ಣುಗಳ ಬೆಲೆಯೂ ಎಂದಿನಂತೆ ಇತ್ತು. ಗ್ರಾಹಕರು ಕಡಿಮೆ ಸಂಖ್ಯೆಯಲ್ಲಿದ್ದರು. ಹೂವಿನ ಮಾರುಕಟ್ಟೆ ಜನರು ಇಲ್ಲದೆ ಸೇವಂತಿ ಮಲ್ಲಿಗೆ ಕನಕಾಂಬರ ಬಿಡಿ ಗುಲಾಬಿ ಮಾದಲಾದ ಹೂವುಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಕಾದಿದ್ದರು.ಒಂದು ಹೂವಿನಗಾರಕ್ಕ 80ರೂ ದರದಲ್ಲಿದ್ದರೆ ಮಲ್ಲಿಗೆ ಕನಕಾಂಬರ ಮಾತ್ರ ಕಡಿಮೆ ದರದಲ್ಲಿ ಇದ್ದವು.

ಹಣ್ಣುಗಳ ಬೆಲೆಯಲ್ಲಿ ಹೆಚ್ಚನ ವ್ಯತ್ಯಾಸ ಇರಲಿಲ್ಲ. ಸೇಬು 150-200ರೂ ಮೊಸಂಬಿ 60-80 ದಾಳೀಮಬೆ 50-70 ಬಾಳೆಹಣ್ಣು 40-50 ದರದಲ್ಲಿ ಮಾತ್ರ ಮಾರಟ ನಡೆಯಿತು.ಕಳೆದ ವರ್ಷದಷ್ಟು ಪ್ರಮಾಣದಲ್ಲಿ ಜನರು ಖರೀದಿಗೆ ಬಂದಿಲ್ಲ ಹೀಗಾಗಿ ಹೂವಿನ ಸಗಟ್ಟು ದರಗಳೂ ನಿರೀಕ್ಷೆಯಂತೆ ದುಬಾರಿಯಾಗಿಲ್ಲ ಎಂದ ವರ್ತಕರು. ಗಣಪತಿ ಕೂರಿಸಲು ಅಗತ್ಯವಾಗಿ ಬೇಕಾದ ತೆಂಗಿನಗರಿಗಳು ಮಾರಟವೂ ಕಳೆಗುಂದಿದೆ.ಇದರ ಜತೆಗೆ ಬಾಳೆಕಂದು,ಮಾವಿನಸೊಪ್ಪು ಸುವಾಸಿತ ಪತ್ರ ಎಲೆಗಳ ಖರೀದಿಯೂ ನೀರಸವಾಗಿದೆ.

Related