ಕೊಮೊಡೊ ಡ್ರ್ಯಾಗನ್ಸ್ ಕಾದಾಟ

ಕೊಮೊಡೊ ಡ್ರ್ಯಾಗನ್ಸ್ ಕಾದಾಟ

ಜಕಾರ್ತ, ಫೆ. 28 : ಅಖಾಡಕ್ಕಿಳಿದ ನಾಲ್ಕು ಕೊಮೊಡೊ ಡ್ರ್ಯಾಗನ್ಗಳು ಕಾದಾಡುವ ಅಪರೂಪದ ವಿಡಿಯೋವೊಂದು ರೋಚಕ. ಇಂಡೋನೇಷ್ಯಾದ ಕೊಮೊಡೋ ದ್ವೀಪದಲ್ಲಿರುವ ಕೊಮೊಡೊ ರಾಷ್ಟ್ರೀಯ ಉದ್ಯಾನವನದಲ್ಲಿ ರೇಂಜರ್ ಕೊನ್ಸ್ಟ್ಯಾಂಟಿನಸ್ ಮುಗಾ ಎಂಬುವರು ಗಸ್ತು ತಿರುಗುವಾಗ ಡ್ರ್ಯಾಗನ್ಗಳ ಕಾದಾಟದ ದೃಶ್ಯವನ್ನು ಸೆರೆಹಿಡಿದಿದ್ದಾರೆ.ಎರಡು ಡ್ರ್ಯಾಗನ್ಗಳು ಒಂದಕ್ಕೊಂದು ಮೇಲೆದ್ದು ಕಾದಾಟ ನಡೆಸಿರುತ್ತದೆ. ಅಲ್ಲಿಗೆ ಮತ್ತೆರೆಡು ಡ್ರ್ಯಾಗನ್ ಬಂದು ಸೇರುತ್ತವೆ. ಬಳಿಕ ನಾಲ್ಕು ಡ್ರ್ಯಾಗನ್ಗಳು ಕಾದಾಟಕ್ಕೆ ಇಳಿಯುತ್ತವೆ.  ಅದರಲ್ಲಿ ಒಂದು ಬೃಹತ್ ಡ್ರ್ಯಾಗನ್ ಸುಮಾರು 8 ಅಡಿ ಎತ್ತರ ನಿಂತು ತನ್ನ ಎದುರಾಳಿಯನ್ನು ಕೆಳಗೆ ಬೀಳಿಸಿ ಅದರ ಮೇಲೆ ಬೀಳುವ ಮೂಲಕ ಕಾದಾಟದಲ್ಲಿ ಜಯಿಸುತ್ತದೆ.
ಇದೊಂದು ಅತ್ಯದ್ಭುತ ಕಾದಾಟದ ದೃಶ್ಯವೆಂದು ರೇಂಜರ್ ಕೊನ್ಸ್ಟ್ಯಾಂಟಿನಸ್ ಮುಗಾ ಅವರು ಬಣ್ಣಿಸಿದ್ದಾರೆ. ಜೊತೆಯಾಗಿ ಕಾದಾಟ ನಡೆಸುವುದನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಆದರೆ, ಗುಂಪಾಗಿ ಕಾದಾಡುವುದನ್ನು ಎಂದಿಗೂ ನೋಡಿರಲಿಲ್ಲ ಎಂದು ಹೇಳಿದ್ದಾರೆ. ಡ್ರ್ಯಾಗನ್ಗಳು ಸುಮಾರು 10 ನಿಮಿಷಗಳವರೆಗೂ ಕಾದಾಟ ನಡೆಸಿವೆ.

 

Related