ಗೋಡಂಬಿ ಉಪಯೋಗ ತಿಳಿಯಿರಿ

ಗೋಡಂಬಿ ಉಪಯೋಗ ತಿಳಿಯಿರಿ

ನಮಗೆ ಗೊತ್ತಿರುವ ಹಾಗೆ ಗೋಡಂಬಿಯನ್ನು ನಾವು ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲಿ ಉಪಯೋಗಿಸುತ್ತೇವೆ. ಉದಾಹರಣೆಗೆ ಶಾವಿಗೆ ಪಾಯಸ ಮಾಡಿದರೆ ಅದರಲ್ಲಿ ಗೋಡಂಬಿ ಚೂರುಗಳನ್ನು ಹಾಕುವುದು ಗೊತ್ತಿರುವ ಸಂಗತಿ.

ಇನ್ನು ಕೇವಲ ಗೋಡಂಬಿ ಮಾತ್ರವಲ್ಲದೆ ಗೋಡಂಬಿ, ಹಣ್ಣಿನ ಮರ, ಗಿಡ, ಎಲೆ, ಕೊಂಬೆ, ರೆಂಬೆ ಇದರಲ್ಲಿ ಹಲವಾರು ರೀತಿಯ ಔಷಧಿ ಗುಣಗಳಿದ್ದು ಇದನ್ನು ಸಾಮಾನ್ಯವಾಗಿ ವಿವಿಧ ರೋಗಗಳಿಗೆ ಉಪಯೋಗಿಸುತ್ತಾರೆ.

ಈ ಗೋಡಂಬಿಯನ್ನು ನಾವು ಕ್ರಮೇಣವಾಗಿ ಪ್ರತಿನಿತ್ಯ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಸೇವಿಸಿದರೆಂದು ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳಿವೆ ಎಂದು ವೈದ್ಯರು ತಿಳಿಸುತ್ತಾರೆ.

ಗೇರುಹಣ್ಣನ್ನು ಆಗಾಗ ಸೇವಿಸುತ್ತಿದ್ದರೆ, ಜಂತುಹುಳುಗಳನ್ನು ನಿಯಂತ್ರಿಸಬಹುದು. ಚರ್ಮರೋಗ, ಹುಣ್ಣುಗಳು, ಮೂಲವ್ಯಾಧಿ, ಆಮಶಂಕೆ ಇವುಗಳ ನಿವಾರಣೆ ಗೇರುಹಣ್ಣಿನ ಸೇವನೆಯಿಂದ ಸಾಧ್ಯವಾಗುತ್ತದೆ.

ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ವಿಟಮಿನ್ ಸಿ ಕೊರತೆಯಿಂದ ಬರುವಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗುತ್ತದೆ. ವಸಡಿನಲ್ಲಿ ಉಂಟಾಗುವ ಹುಣ್ಣುಗಳ ನಿವಾರಣೆಗೆ ಈ ಗೇರುಹಣ್ಣನ್ನು ಸಕ್ಕರೆಪಾಕದಲ್ಲಿ ಕುದಿಸಿ ತೆಗೆದಿಟ್ಟುಕೊಂಡು ತಿನ್ನುತ್ತಾ ಬಂದರೆ, ವಸಡಿನ ಹುಣ್ಣು ಗುಣವಾಗುತ್ತದೆ.

ಮೆಗ್ನೀಷಿಯಂ ಅಧಿಕವಾಗಿರುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ತಾಮ್ರದ ಅಂಶ ಇದರಲ್ಲಿ ಅಧಿಕವಾಗಿರುವುದರಿಂದ ಕೂದಲಿಗೆ ಕಪ್ಪುಬಣ್ಣವನ್ನು ಒದಗಿಸುತ್ತದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಧಿಕವಾಗಿರುವುದರಿಂದ ಇದರ ನಿರಂತರ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ.

ಗೋಡಂಬಿ ಹಣ್ಣುಗಳು ಪ್ರೊಆಂಥೋಸಯಾನಿನ್‌ಗಳು ಎಂದು ಕರೆಯಲ್ಪಡುವ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ಕ್ಯಾನ್ಸರ್ ಕೋಶಗಳ ಪುನರಾವರ್ತನೆಯನ್ನು ನಿಗ್ರಹಿಸುವ ಫ್ಲೇವೊನಾಲ್‌ಗಳ ವರ್ಗವಾಗಿದೆ. ಇದು ಒಂದು ಪ್ರಮುಖ ಕಾರ್ಯವಾಗಿದೆ, ಒಮ್ಮೆ ಕ್ಯಾನ್ಸರ್ ಕೋಶ ಪುನರಾವರ್ತನೆ ಪ್ರಾರಂಭವಾದಾಗ, ತ್ವರಿತವಾಗಿ ಹಿಡಿತವನ್ನು ಪಡೆಯುವುದು ಕಷ್ಟಕರವಾಗುತ್ತದೆ ಮತ್ತು ಪ್ರಕ್ರಿಯೆಯಲ್ಲಿ ಕ್ಯಾನ್ಸರ್-ಹಾನಿಕಾರಕ ಉತ್ತಮ ಕೋಶಗಳಿಗೆ ಚಿಕಿತ್ಸೆ ನೀಡುವಾಗ ಶಾಟ್‌ಗನ್ ವಿಧಾನವನ್ನು ಹೆಚ್ಚಾಗಿ ಏಕೆ ಬಳಸಲಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಜೊತೆಗೆ, ಗೋಡಂಬಿಯು ತಾಮ್ರದಲ್ಲಿ ಸಮೃದ್ಧವಾಗಿದೆ, ಇದು ಜೀವಕೋಶದ ರೂಪಾಂತರದ ಪ್ರವೃತ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಕ್ಯಾನ್ಸರ್ ಅನ್ನು ನಿರ್ವಹಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ನಿರ್ದಿಷ್ಟ ಭರವಸೆಯನ್ನು ತೋರಿಸುತ್ತದೆ.

Related