ಚೀನಾದಲ್ಲಿ ಕಿಲ್ಲರ್ ಕೊರೋನಾ

ಚೀನಾದಲ್ಲಿ ಕಿಲ್ಲರ್ ಕೊರೋನಾ

ಬೀಜಿಂಗ್/ಸಿಯೋಲ್ ಮಾ.1 : ಮಾರಕ ಕೊರೋನಾ ವೈರಾಣು (ಕೋವಿಡ್-19) ಸೋಂಕಿನಿಂದಾಗಿ ಚೀನಾ ಅಯೋಮಯವಾಗಿದ್ದು, ವಿವಿಧ ಪ್ರಾಂತ್ಯಗಳಲ್ಲಿ ಸಾವಿನ ಸರಣಿ ಮುಂದುವರೆದಿದೆ. ಈವರೆಗೆ 2,900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಚೀನಾ ನಂತರ ಹೊಸ ವೈರಾಣು ಸೋಂಕಿನಿಂದ ಅತಿ ಹೆಚ್ಚು ಬಾಧಿತವಾಗಿರುವ ದೇಶವೆಂದರೆ ದಕ್ಷಿಣ ಕೊರಿಯಾ. ಅಲ್ಲಿಯೂ ಸೋಂಕು ಪೀಡಿತರ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿ ಏರುತ್ತಲೇ ಇದೆ. ಈವರೆಗೆ 3,.500ಕ್ಕೂ ಹೆಚ್ಚು ಮಂದಿಗೆ ವೈರಾಣು ಸೋಂಕು ತಗುಲಿದೆ. ಈವರೆಗೆ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಚೀನಾ ವಿವಿಧೆಡೆ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ರೋಗ ಪೀಡಿತರ ಸಂಖ್ಯೆ 80,000ಕ್ಕೇರಿದೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ರಾಜಧಾನಿ ಸಿಯೋಲ್ ಸೇರಿದಂತೆ ವಿವಿಧೆಡೆ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಪ್ರತಿಷ್ಠಿತ ಸ್ಯಾಮ್ಸಂಗ್ ಸೇರಿದಂತೆ ಅನೇಕ ಸಂಸ್ಥೆಗಳು ಬಾಗಿಲು ಮುಚ್ಚಿದ ಸ್ಥಿತಿಯಲ್ಲೇ ಮುಂದುವರಿವೆ.

Related