ಹೊಸ ದಾಖಲೆ ಬರೆದ ಕಿಚ್ಚ!

ಹೊಸ ದಾಖಲೆ ಬರೆದ ಕಿಚ್ಚ!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟ ಕಿಚ್ಚ ಸುದೀಪ್ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸುದೀಪ್ ಅವರು ನಟನೆಯ ಜೊತೆ ನಿರೂಪಣೆಯನ್ನು ಸಹ ಮಾಡುತ್ತಾರೆ.

ಹೌದು ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಿರೂಪಣೆ ಮಾಡುವುದರ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

ಕನ್ನಡದ ಬಿಗ್ ಬಾಸ್ ನಾನಾ ಕಾರಣಗಳಿಂದಾಗಿ ವಿಶೇಷ ಮತ್ತು ಹೊಸತು ಅನಿಸುತ್ತದೆ. ಇಂತಹ ಶೋ ಮೂಲಕ ಕಿಚ್ಚ ಸುದೀಪ್ ದಾಖಲೆಯೊಂದನ್ನು ಬರೆದಿದ್ದಾರೆ. ಆ ದಾಖಲೆಯನ್ನು ಸ್ವತಃ ಕಲರ್ಸ್ ಕನ್ನಡ ವಾಹಿನಿಯೇ ಇಂದು ಬಹಿರಂಗ ಪಡಿಸಿದೆ. ಈ ಮೂಲಕ ಸುದೀಪ್‍ ವೃತ್ತಿ ಬದುಕಿಗೆ ಇದೊಂದು ಗೌರವದ ಸಂಗತಿಯೂ ಆಗಿದೆ.

ಭಾರತದಾದ್ಯಂತ ಬಿಗ್ ಬಾಸ್ ಶೋಗಳು ಆಯೋಜನೆಯಾಗಿವೆ. ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಕಡೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಈ ಎಲ್ಲ ಶೋಗಳಲ್ಲೂ ನಿರೂಪಕರು ಬದಲಾಗಿದ್ದಾರೆ. ಆದರೆ, ಮೊದಲ ಸೀಸನ್ ನಿಂದ ಈವರೆಗೂ ಕನ್ನಡದಲ್ಲಿ ನಿರೂಪಕರು ಬದಲಾಗಿಲ್ಲ. ಸುದೀಪ್ ಅವರೇ ಹತ್ತೂ ಸೀಸನ್ ಗಳನ್ನು ನಡೆಸಿಕೊಂಡು ಬಂದು ದಾಖಲೆ ಬರೆದಿದ್ದಾರೆ. ಇಂತಹ ದಾಖಲೆಯನ್ನು ಬೇರೆ ಯಾವ ಭಾಷೆಯಲ್ಲೂ ನಡೆದಿಲ್ಲ ಎನ್ನುವುದು ವಿಶೇಷ.

ಕೇವಲ ಟಿವಿಯಲ್ಲಿ ಪ್ರಸಾರವಾಗುವ ಶೋ ಮಾತ್ರವಲ್ಲ, ಓಟಿಟಿಗಾಗಿ ಬಿಗ್ ಬಾಸ್ ಆಯೋಜನೆ ಮಾಡಿದ್ದರೂ, ಅದನ್ನೂ ಸುದೀಪ್ ಅವರೇ ನಡೆಸಿಕೊಂಡು ಬಂದಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಅಡುಗೆ ರೀತಿಯ ಕಾರ್ಯಕ್ರಮವನ್ನೂ ಅವರು ಆಯೋಜನೆ ಮಾಡಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಸುದೀಪ್ ವಿಶೇಷ ಅನಿಸುತ್ತಾರೆ.

Related