ವಿಕ್ರಾಂತ್ ರೋಣ ಚಿತ್ರದ ಮತ್ತೊಂದು ಬಿಗ್ ಅಪ್ ಡೇಟ್..!!

  • In Cinema
  • May 21, 2022
  • 321 Views

ಸುದೀಪ್ ನಟನೆಯ ವಿಕ್ರಾಂತ್ ರೋಣ ಕಡೆಯಿಂದ ಬಂದ ಮತ್ತೊಂದು ಅಪ್ ಡೇಟ್ ಎಂದರೆ ಮೊದಲ ಹಾಡಿನ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ವಿಕ್ರಾಂತ್ ರೋಣ ಸಿನಿಮಾದ ಹೈವೋಲ್ಟೇಜ್ ಹಾಡಾಗಿರುವ ಗಡಗ್ ರಕ್ಕಮ್ಮ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲು ಸಿನಿಮಾತಂಡ ನಿರ್ಧರಿಸಿದ್ದು ದಿನಾಂಕ ಕೂಡ ಬಹಿರಂಗ ಪಡಿಸಿದ್ದಾರೆ.


ಅಭಿನಯ ಚಕ್ರವರ್ತಿ ಕಿಚ್ಚ (Sudeep) ಸದ್ಯ ವಿಕ್ರಾಂತ್ ರೋಣ(Vikrant Rona) ಸಿನಿಮಾ ಬಿಡುಗಡೆ ತಯಾರಿಯಲ್ಲಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ವಿಕ್ರಾಂತ್ ರೋಣನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ವಿಕ್ರಾಂತ್ ರೋಣ ಸಿನಿಮಾದಿಂದ ಮತ್ತೊಂದು ಬಿಗ್ ಅಪ್ ಡೇಟ್ ಹೊರಬಿದ್ದಿದೆ. ಇತ್ತೀಚಿಗಷ್ಟೆ ಮೇ 16ರಂದು ಸಿನಿಮಾದಿಂದ ಭರ್ಜರಿ ಸುದ್ದಿ ಹೊರಹಾಕಿದ್ದರು. ಇದೀಗ ಮತ್ತೊಂದು ಅಪ್ ಡೇಟ್ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.


ಅಂದಹಾಗೆ ವಿಕ್ರಾಂತ್ ರೋಣ ಕಡೆಯಿಂದ ಬಂದ ಮತ್ತೊಂದು ಅಪ್ ಡೇಟ್ ಎಂದರೆ ಮೊದಲ ಹಾಡಿನ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ವಿಕ್ರಾಂತ್ ರೋಣ ಸಿನಿಮಾದ ಹೈವೋಲ್ಟೇಜ್ ಹಾಡಾಗಿರುವ ಗಡಗ್ ರಕ್ಕಮ್ಮ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲು ಸಿನಿಮಾತಂಡ ನಿರ್ಧರಿಸಿದ್ದು ದಿನಾಂಕ ಕೂಡ ಬಹಿರಂಗ ಪಡಿಸಿದ್ದಾರೆ. ಹೌದು, ಬಹುನಿರೀಕ್ಷೆಯ ಹಾಡು ಮೇ 23ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ವಿಕ್ರಾಂತ್ ರೋಣ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ.

Related