ಕೆಜಿಎಫ್ 2 ಚಿತ್ರ ರಿಲೀಸ್ ಯಾವಾಗ?

  • In Cinema
  • August 4, 2020
  • 468 Views
ಕೆಜಿಎಫ್ 2 ಚಿತ್ರ ರಿಲೀಸ್ ಯಾವಾಗ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಬಗ್ಗೆ ಅಭಿಮಾನಿಗಳು ತೀವ್ರ ಕುತೂಹಲ ಭರಿತರಾಗಿದ್ದು, ರಿಲೀಸ್‍ಗಾಗಿ ಕಾಯುತ್ತಿದ್ದಾರೆ.

ಕೊರೋನಾದಿಂದ ಸ್ವಲ್ಪ ರಿಲೀಫ್ ಸಿಗುತ್ತೆ, ಕೆಜಿಎಫ್ ಸಿನಿಮಾ ನೋಡಬಹುದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಈಗ ಸ್ವಲ್ಪ ಮಟ್ಟಿಗೆ ನಿರಾಸೆ ಆಗಿದೆ. ಹೌದು ಕೆಜಿಎಫ್ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ಈಗಾಗಲೇ ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ತ್ ಅವರು ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟಿಸಿತ್ತು. ಇದೇ ತಿಂಗಳ 15ರ ಮೇಲೆ ಸಿನಿಮಾ ಶೂಟಿಂಗ್ ನಡೆಸಲು ಸಹ ಚಿತ್ರತಂಡ ಸಜ್ಜಾಗಿದೆ.

ಕೆಜಿಎಫ್ 2 ಚಿತ್ರವನ್ನು ಅಕ್ಟೋಬರ್ 23ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಶೂಟಿಂಗ್ ಬಾಕಿ ಇದ್ದು ಮುಂದಿನ ವರ್ಷ ಜನವರಿ ಸಂಕ್ರಾಂತಿ ಹಬ್ಬದ ಎಳ್ಳು ಬೆಲ್ಲದ ಜೊತೆ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಆದರೆ ಇನ್ನು ಅಧಿಕೃತ ಮಾಹಿತಿಯನ್ನು ಚಿತ್ರತಂಡದಿಂದ ಬಂದಿಲ್ಲ.

Related