Hollywood ರೇಂಜ್ ನಲ್ಲಿ ಇರುತ್ತಂತೆ KGF-3..!!

  • In Cinema
  • May 14, 2022
  • 245 Views

ಯಶ್ ಅಭಿನಯದ ಬ್ಲಾಕ್ ಬಸ್ಟರ್ ಕೆಜಿಎಫ್ 2 ಚಿತ್ರ ಸದ್ಯ ಎಲ್ಲಾ ದಾಖಲೆಗಳನ್ನೂ ಮುರಿದುಹಾಕಿದೆ. ಇದೀಗ ಎಲ್ಲಡೆ ಕೆಜಿಎಫ್ 3 ಕುರಿತ ಚರ್ಚೆಗಳು ಆರಂಭವಾಗಿದೆ. ಇದರ ನಡುವೆ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಕೆಜಿಎಫ್ 3 ಕುರಿತು ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.

ಕೆಜಿಎಫ್ -2 ಸೃಷ್ಟಿಸಿದ ಅಲೆ ಇನ್ನೂ ಮುಗಿದಿಲ್ಲ. 2022 ರ ಭಾರತದ ಅತಿದೊಡ್ಡ ಚಿತ್ರ ಯಾವುದು ಎಂದರೆ ಯಾರಾದರೂ ನಿಸಂಶಯವಾಗಿ ಕೆಜಿಎಫ್ 2 ಎಂದು ಹೇಳುತ್ತಾರೆ. ಇದರ ನಡುವೆ ಇನ್ನೂ ಸಿನಿಪ್ರೀಯರು ಕೆಜಿಎಫ್ 2 ಹ್ಯಾಂಗೋವರ್ ನಿಂದ ಹೊರಬಂದಿಲ್ಲ. ಇದರ ನಡುವೆ ಪ್ರೇಕ್ಷಕರನ್ನು ರೋಮಾಂಚನಗೊಳಿಸುವ ಘೋಷಣೆಯೊಂದು ಹೊರಬಿದ್ದಿದೆ.

ಕೆಜಿಎಫ್ 3 ಕುರಿತು ಎಲ್ಲಡೆ ಮಾತನಾಡುತ್ತಿರುವಾಗಲೇ ಚಿತ್ರದ ನಿರ್ಮಾಪಕರು ದೊಡ್ಡ ಮಾಹಿತಿಯೊಂದನ್ನು ಹೊರಹಾಕಿದ್ದು, ಕೆಜಿಎಫ್ 3 ಬರುವುದು ಖಚಿತ ಪಡಿಸಿದ್ದಾರೆ. ಕೆಜಿಎಫ್ 3 ಚಿತ್ರದ ಚಿತ್ರೀಕರಣ ಈ ವರ್ಷ ಪ್ರಾರಂಭವಾಗಲಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗುಂದೂರು ಅವರೇ ಈ ಮಾಹಿತಿಯನ್ನು ನೀಡಿದ್ದಾರೆ.
ಕೆಜಿಎಫ್ 2 ಏಪ್ರಿಲ್ 14 ರಂದು ಬಿಡುಗಡೆಯಾಗಿ ಬಿಡುಗಡೆಯಾದ ದಿನದಿಂದಲೂ ದಾಖಲೆಗಳನ್ನು ಮಾಡುತ್ತಲಿದೆ. ಇದೀಗ ಅಧಿಕೃತವಾಗಿ ಎಂಬಂತೆ ಈ ಚಿತ್ರದ ಮೂರನೇ ಭಾಗ ಅನೌನ್ಸ್ ಆಗಿದೆ.


ಚಿತ್ರದ ಮೂರನೇ ಭಾಗ ಬರುತ್ತಿರುವುದು ಮಾತ್ರವಲ್ಲದೆ, ನಿರ್ಮಾಪಕರು ಇನ್ನೂ ಕೆಲವು ವಿವರಗಳನ್ನು ಬಹಿರಂಗ ಪಡಿಸಿದ್ದಾರೆ. ಅಧ್ಯಾಯ 3 ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ನೋಡಿರದ ಮೇಕಿಂಗ್ ಅನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.

Related