ಸೆ.29ಕ್ಕೆ ಕರ್ನಾಟಕ ಬಂದ್​!

ಸೆ.29ಕ್ಕೆ ಕರ್ನಾಟಕ ಬಂದ್​!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ರಾಜ್ಯದಲ್ಲಿ ಕಾವೇರಿಯ ಕಿಚ್ಚು ದಿನೇ ದಿನ ಹೆಚ್ಚಾಗುತ್ತಿದೆ.

ಇದರ ಬೆನ್ನಲ್ಲೇ ನೆನ್ನೆ ರಾಜ್ಯದ ರಾಜಧಾನಿಯಲ್ಲಿ ಬಂದ್ ಗೆ ಕರೆ ನೀಡಲಾಗಿತ್ತು. ಇನ್ನು ಇದೇ ಸೆಪ್ಟೆಂಬರ್ 29 ಶುಕ್ರವಾರ ಕರ್ನಾಟಕದ ಬಂದೆ ಗೆ ಕರೆ ನೀಡಲಾಗಿದೆ ಎಂದು ತಿಳಿದು ಬರುತ್ತಿದೆ.

ನಮ್ಮ ರಾಜ್ಯದಿಂದ ತಮಿಳುನಾಡಿಗೆ ನೀರನ್ನು ಬಿಡಲೇ ಬೇಕಾದ ಅನಿವಾರ್ಯತೆಗೆ ರಾಜ್ಯ ಸರ್ಕಾರ ಸಿಲುಕಿದೆ. ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್‌ ಆದೇಶಕ್ಕೆ ತಲೆ ಬಾಗಲೇಬೇಕಾದ ಅನಿವಾರ್ಯತೆ ಸಿಲುಕಿರುವ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಹೋರಾಟ ತೀವ್ರಗೊಂಡಿದ್ದು ರೈತಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ನೀಡಿದ ಬೆಂಗಳೂರು ಬಂದ್‌ ಕರೆಗೆ ಇಡೀ ಬೆಂಗಳೂರು ಸ್ತಬ್ಧ ಆಗಿತ್ತು.

29 ನೇ ತಾರೀಖಿನಂದು ಇಡೀ ಕರ್ನಾಟಕ ರಾಜ್ಯ ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ಬಂದ್‌ಗೆ ಗೂಡ್ಸ್ ವಾಹನ್, ಖಾಸಗಿ ವಾಹನ ಮಾಲೀಕರು, ಖಾಸಗಿ ಶಾಲೆಗಳು, ಲಾರಿ ಮಾಲೀಕರು ಹಾಗೂ ಚಾಲಕರು, ಸರ್ಕಾರಿ ನೌಕರು ಹಾಗೂ ಆಟೋ ಚಾಲಕರು ಹಾಗೂ ಮಾಲೀಕರು ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ.

150ಕ್ಕೂ ಅಧಿಕ ಸಂಘಟನೆಗಳ ಬೆಂಬಲದಿಂದ ಬೆಂಗಳೂರು ಬಂದ್ ಸಕ್ಸಸ್ ಆಗಿದೆ. ಇನ್ನೂ ಶುಕ್ರವಾರ 29ನೇ ತಾರೀಖಿನಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಇದೇ ತರಹ ರಾಜ್ಯದ ಎಲ್ಲ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದರೆ ಬೆಂಗಳೂರು ಬಂದ್ ತರಹ ಕರ್ನಾಟಕ ಬಂದ್‌ ಕೂಡ ಯಶಸ್ವಿ ಆಗುವ ಸಾರ್ಧಯತೆ ಇದೆ.

 

Related