ಕರವೇ ಹೋರಾಟಗಾರರನ್ನು ಬಿಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ: ಪ್ರವೀಣ್ ಶೆಟ್ಟಿ

ಕರವೇ ಹೋರಾಟಗಾರರನ್ನು ಬಿಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ: ಪ್ರವೀಣ್ ಶೆಟ್ಟಿ

ಬೆಂಗಳೂರು: ಕನ್ನಡ ನಾಡಲ್ಲಿ ಕನ್ನಡ ಭಾಷೆಗೆ ಬೆಲೆವಿ ಇಲ್ಲ ಎಂದು ನಿನ್ನೆ ಕರವೇ ಸಂಘಟನಾ ಕಾರ್ಯಕರ್ತರು ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ 29 ಕನ್ನಡ ಹೋರಾಟಗಾರನು ಬಂಧಿಸಲಾಗಿದೆ. 29 ಜನರನ್ನು ಬಿಡುಗಡೆ ಮಾಡದಿದ್ದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಬಂಧನಕ್ಕೊಳಗಾಗಿರುವ ಕನ್ನಡ ಪರ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದರೆ ರಾಜಧಾನಿ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಕ್ರಾಂತಿಕಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ನಾಮಫಲಕವನ್ನು ಕಡ್ಡಾಯಗೊಳಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ. ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಎನ್ನುವ ಕಾನೂನಿದೆ. ಅಂಗಡಿ ಪರವಾನಗಿ ಕೊಡಬೇಕಾದರೇ ಸರ್ಕಾರ ಇದನ್ನು ಪಾಲಿಸಬೇಕು. ಆದರೆ ‌ಇಲ್ಲಿಯವರೆಗೆ ಯಾವುದೇ ಹೋಟೆಲ್, ಮಾಲ್ ಹಾಗೂ ಐಟಿಬಿಟಿ ಕಂಪನಿಗಳು ಪಾಲನೆ ಮಾಡ್ತಿಲ್ಲ.ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನ ಆಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

 

Related