ಕನ್ನಡ ಸಾಹಿತ್ಯಕ್ಕೆ ಚೌಡೇಗೌಡರಂತ ಸೇವಕರು ಅವಶ್ಯ; ಶ್ರೀಕಾಂತ್

ಕನ್ನಡ ಸಾಹಿತ್ಯಕ್ಕೆ ಚೌಡೇಗೌಡರಂತ ಸೇವಕರು ಅವಶ್ಯ; ಶ್ರೀಕಾಂತ್

ಹೊಸಕೋಟೆ – ಕಸಾಪ ಹುದ್ದೆ ನಿಭಾಯಿಸುವವರು ಸೇವಕ ಕನ್ನಡದ ಪೂಜಾರಿಗಳಂತೆ ವರ್ತಿಸಬೇಕು ಗದ್ದುಗೆಗಾಗಿ ಮೀಸಲಾಗುವುದು ಬೇಡ ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ವಿ.ಶ್ರೀಕಾಂತ್ ಅಭಿಪ್ರಾಯಪಟ್ಟರು.
ಹೊಸಕೋಟೆ ತಾ. ಕಸಾಪ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ಸಂಯುಕ್ತ ಆಶ್ರಯ ಚಿಕ್ಕಕೋಲಿಗ ಸರ್ಕಾರಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಜನಪದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಸಾಪ ಕಾರ್ಯಕ್ರಮಗಳು ನಾಡು, ನುಡಿ, ಸ್ವಾಭಿಮಾನದ ಪ್ರತೀಕವಾಗಬೇಕು ಎಂದರು.

ರಂಗಕಲಾವಿದ ಡಿ.ಲಕ್ಷ್ಮೀನಾರಾಯಣ್  ಮಾತನಾಡಿ, ಜನಪದ ಕಲೆ ಜನರ ಬಾಯಿಂದ ಬಾಯಿಗೆ ಬಂದ ಬಾಷೆ ಇದನ್ನು ಲಿಖಿತವಾಗಿ ಗುರುತಿಸಲು ಸಾಧ್ಯವಿಲ್ಲ ಇಂತಹ ಶೈಲಿಯಲ್ಲಿ ಗ್ರಾಮೀಣ ಭಾಗದ ಅನೇಕ ಎಲೆಮರೆಕಾಯಿಯಂತ ಕಲಾವಿದರಿಂದ ಗುರುತಿಸಿ ವೇದಿಕೆ ರೂಪಿಸಿಕೊಡಬೇಕು ಎಂದರು.ಕಲಾವಿದರು ತುಂಬಾ ಸಂಕಷ್ಟದಲ್ಲಿ ಬೆಂ. ಗ್ರಾ. ಜಿ ವ್ಯಾಪ್ತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಕೋರೊನಾ ಪರಿಹಾರವನ್ನಾಗಿ ಆಹಾರದ ಕಿಟ್ ನೀಡಬೇಕಾಗಿ ಮನವಿ ಮಾಡಿದರು.

ಕಸಾಪ ಅಧ್ಯಕ್ಷ ಕೆ.ಎಂ.ಚೌಡೇಗೌಡ ಮಾತನಾಡಿ, ಕನ್ನಡ ಶಾಲೆಗಳು ಅಭಿವೃದ್ದಿಯಾಗಬೇಕು, ಪೋಷಕರಲ್ಲಿರುವ ಆಂಗ್ಲ ವ್ಯಾಮೋಹ ತೊಲಗಬೇಕು, ಕನ್ನಡ ಭಾಷಾ ಅಧ್ಯಯನ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉದ್ಯೋಗವಕಾಶ ಹೆಚ್ಚಾಗಬೇಕು ಎಂದರು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು, ಕಲಾವಿದರು, ಸಾಹಿತ್ಯ ಆಸಕ್ತರಿಗೆ ಪ್ರೋತ್ಸಾಹ ನೀಡಲಾಗುವುದು. ಶಿಕ್ಷಣ ಇಲಾಖೆ ಜೊತೆಗೂಡಿ ಗ್ರಾಮಗಳಲ್ಲಿ ದಾಖಲಾತಿ ಆಂದೋಲನ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕು ಎಂದರು.
ಕಲಾವಿದ ಈಶ್ವರಪ್ಪ ಪೂಜಾರಿ ಅವರನ್ನು ಇದೇ ಸಂಧರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಉಪಾಧ್ಯಕ್ಷ.ಜಿ.ಶ್ರೀನಿವಾಸ್, ಜಡಿಗೇನಹಳ್ಳಿ ಹೋಬಳಿ ಅಧ್ಯಕ್ಷ ರವಿಸಿರಿ, ಮಾಜಿ ಗೌರವ ಕಾರ್ಯದರ್ಶಿ ಬೈರಪ್ಪ, ಎನ್.ಮುನಿನಾರಾಯಣಸ್ವಾಮಿ, ಅಶ್ವತ್ಥ್, ಮಾಜಿ ಸಿರ‍್ಪಿ ಅಶ್ವತ್ಥ್, ಶಾಲಾ ಅಧ್ಯಕ್ಷ ರಾಮಾಂಜಿನಪ್ಪ, ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಕಲಾವಿದ ಬಿದಲಪುರ ರಾಜೇಂದ್ರ ಪ್ರಸಾಧ್, ಇತರರು ಇದ್ದರು.

Related