ಕೈ ಸರ್ಕಾರದ ವಿರುದ್ಧ ಕಮಲ ವಾಗ್ದಾಳಿ

ಕೈ ಸರ್ಕಾರದ ವಿರುದ್ಧ ಕಮಲ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇಲ್ಲಿಯವರೆಗೆ ಯಾವುದೊಂದು ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲವೆಂದು ಬಿಜೆಪಿ ಪಕ್ಷವೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ವಿವಿಧ ರೀತಿಯ ಅನುದಾನಗಳಿದ್ದರೂ ಸಹ ಯಾವುದೇ ಒಂದು ಅನುದಾನವನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಈ ಕಾಂಗ್ರೆಸ್ ಸರ್ಕಾರಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತದೆ ಎಂದು ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧ ಕೆಂಡಮಂಡಲವಾಗಿದೆ.

ಇನ್ನು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷವು ಟ್ವೀಟ್ ಮೂಲಕ ವಿರೋಧವನ್ನು ವ್ಯಕ್ತಪಡಿಸುತ್ತಿದೆ.

▪️ರೈತ ವಿರೋಧಿ‌ : 456 ಅನ್ನದಾತರ ಸಾವು

▪️ಮಹಿಳಾ ವಿರೋಧಿ : ರಕ್ಷಣೆಯೂ ಇಲ್ಲ ಗೌರವವೂ ಇಲ್ಲ

▪️ಪರಿಶಿಷ್ಟ ಸಮುದಾಯ ವಿರೋಧಿ : ₹11,000 ಕೋಟಿಗೆ ಪಂಗನಾಮ

▪️ ಹಿಂದೂ ವಿರೋಧಿ : ದೇವಾಲಯಗಳ ಮೇಲೆ ಕಳ್ಳಗಣ್ಣು

ಜನ ವಿರೋಧಿ – ನಾಡ ವಿರೋಧಿ ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ವಿರೋಧ ಕಟ್ಟಿಕೊಂಡು ಕರ್ನಾಟಕವನ್ನು ದಿವಾಳಿ ಮಾಡುತ್ತಿದೆ. ಇದಕ್ಕೆ ಪರಿಹಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾರರು ತಕ್ಕ ಪಾಠ ಕಲಿಸಿಕೊಡುತ್ತಾರೆ ಎಂದು ಟ್ವೇಟ್‌ ಮೂಲಕ ಬಿಜೆಪಿ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ.

ಅದರಲ್ಲೂ ಪರಿಶಿಷ್ಟ ಜಾತಿ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಮಕ್ಕಳ ವಸತಿ ಶಾಲೆಗಳು ಸ್ಥಿತಿಯಂತೂ ಹೀನಾಯವಾಗಿದ್ದು ಇದರ ಬಗ್ಗೆ ರಾಜ್ಯದಲ್ಲಿ ಇಲ್ಲಿಯವರೆಗೂ ಯಾರು ಕ್ಯಾರೆನ್ನುತ್ತಿಲ್ಲ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

 

Related