ಸಿದ್ದರಾಮಯ್ಯ ತವರಲ್ಲಿ ಸದ್ದಿಲ್ಲದೆ ಅರಳುತ್ತಿದೆ ‘ಕಮಲ’

ಸಿದ್ದರಾಮಯ್ಯ ತವರಲ್ಲಿ ಸದ್ದಿಲ್ಲದೆ ಅರಳುತ್ತಿದೆ ‘ಕಮಲ’

ಮೈಸೂರು : ಮೈಸೂರು ಜಿಲ್ಲೆ ಮತ್ತು ಹಳೇ ಮೈಸೂರು ಭಾಗ ಕಾಂಗ್ರೆಸ್ ನ ಸಾಂಪ್ರಾದಾಯಿಕ ಭದ್ರಕೋಟೆಯಾಗಿದ್ದು, ನಿಧಾನವಾಗಿ ಬಿಜೆಪಿ ನೆಲೆಯೂರುತ್ತಿದೆ.

ಬಿಜೆಪಿ ಸಂಸದ ಮತ್ತು ಹಿರಿಯ ದಲಿತ ಮುಖಂಡ ವಿ. ಶ್ರೀನಿವಾಸ ಪ್ರಸಾದ್ ಅವರು ತಮ್ಮ ಲೋಕಸಭಾ ಕ್ಷೇತ್ರದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತಿದ್ದು ಈಗಾಗಲೇ ಕೊಳ್ಳೇಗಾಲ, ಚಾಮರಾಜನಗರ ಮತ್ತು ಹುಣಸೂರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಶಸ್ಸಿನ ರುಚಿ ನೋಡಿದ್ದಾರೆ.

ಜೆಡಿಎಸ್ ಅನ್ನು ದೂರವಿಡಲು ಕಾಂಗ್ರೆಸ್ ಮತ್ತು ಬಿಜೆಪಿಗಳು ಹನೂರು ಪ.ಪಂ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದನ್ನು ಯಾರು ಊಹಿಸಿರಲಿಲ್ಲ, ಗ್ರಾ.ಪಂ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಎಣ್ಣೆ ಸೀಗೆಕಾಯಿಯಂತೆ ಹೋರಾಟ ನಡೆಸಿದ್ದವು, ಆದರೆ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಶಾಸಕ ನರೇಂದ್ರ ಅವರನ್ನು ಬೆಂಬಲಿಸುವ ಮೂಲಕ ಜೆಡಿಎಸ್ ನ ಆರು ಸದಸ್ಯರನ್ನು ಹೊರಗಿಟ್ಟಿದ್ದಾರೆ, 8 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ಪಟ್ಟ ಅಲಂಕರಿಸಿದೆ.

Related