ಕೆಂಗೇರಿ ಬಡಾವಣೆಯಲ್ಲಿ ಹಕ್ಕಿಗಳ ಸಾವು

ಕೆಂಗೇರಿ ಬಡಾವಣೆಯಲ್ಲಿ ಹಕ್ಕಿಗಳ ಸಾವು

ಬೆಂಗಳೂರು, ಮಾ.11 : ನಗರದ ಕೆಂಗೇರಿ ವಾರ್ಡ್ನ ಟೆಲಿಕಾಂ ಬಡಾವಣೆಯಲ್ಲಿ ಎರಡು ವಾರದಲ್ಲಿ ವಿವಿಧ ಜಾತಿಗಳ 10ಕ್ಕೂ ಹೆಚ್ಚು ಹಕ್ಕಿಗಳು ಸತ್ತಿವೆ. ಪ್ರದೇಶದಲ್ಲಿ ಮೊಬೈಲ್ ಗೋಪುರ ಕಾರ್ಯಾಚರಣೆ ಆರಂಭಿಸಿದ ಬಳಿಕವೇ ಪಕ್ಷಿಗಳು ವಿಚಿತ್ರವಾಗಿ ವರ್ತಿಸಲಾರಂಭಿಸಿವೆ. ಈ ವೈ–ಫೈ ಗೋಪುರವು ನಿಗದಿತ ಮಿತಿಗಿಂತ ಹೆಚ್ಚು ವಿದ್ಯುತ್ ಕಾಂತೀಯ ವಿಕಿರಣ ಹೊರಸೂಸುತ್ತಿರುವುದರಿಂದಲೇ ಈ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಗೋಪುರದಿಂದ ಹೊರಹೊಮ್ಮುವ ವಿದ್ಯುತ್ ಕಾಂತೀಯ ವಿಕಿರಣ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆತಂಕ ತೋಡಿಕೊಂಡಿದ್ದಾರೆ. ‘ಟೆಲಿಕಾಂ ಬಡಾವಣೆಯ ಬಾಲಗಂಗಾಧರನಾಥ ಸ್ವಾಮೀಜಿ ಉದ್ಯಾನದಲ್ಲಿ ಎರಡು ವರ್ಷಗಳ ಹಿಂದೆ ಉಚಿತವಾಗಿ ವೈ–ಫೈ ಸೇವೆ ನೀಡುವ ಸಲುವಾಗಿ ಈ ಗೋಪುರವನ್ನು ಅಳವಡಿಸಿದ್ದರು. ಆಗಲೇ ಸ್ಥಳೀಯರೆಲ್ಲ ಸೇರಿ ವಿರೋಧಿಸಿದ್ದೆವು. ಈ ಗೋಪುರ ಮೂರು ತಿಂಗಳಿಂದ ಈಚೆಗೆ ಕೆಲಸ ನಿರ್ವಹಣೆ ಆರಂಭಿಸಿದೆ. ಆ ಬಳಿಕ ಅದರಿಂದ ವಿಚಿತ್ರ ಸದ್ದು ಹೊರಹೊಮ್ಮುತ್ತಿದೆ.

Related