ಕೋಟಿ ಕೋಟಿ ಹಣ ದೋಚಿದ್ದ ಕದೀಮರು ಪೊಲೀಸರ ಕೈ ವಶ

ಕೋಟಿ ಕೋಟಿ ಹಣ ದೋಚಿದ್ದ ಕದೀಮರು ಪೊಲೀಸರ ಕೈ ವಶ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಳ್ಳತನ ಮಾಡುವವರ ಗುಂಪುಗಳು ಹೆಚ್ಚಾಗುತ್ತಿದ್ದು ವಯೋ ವೃದ್ಧಿಯನ್ನೇ ಟಾರ್ಗೆಟ್ ಮಾಡಿರುವಂತಹ ಕದೀಮರ ಗುಂಪೊಂದು ಕೋಟಿ ಕೋಟಿ ಹಣದೋಚಿರುವ ಸಂಗತಿ ಬೆಳಕಿಗೆ ಬಂದಿದೆ.

ಈ ಗುಂಪು ವಯೋವೃದ್ಧರನ್ನು ಗುರಿಯಾಗಿಸಿ ವಂಚನೆ ಮಾಡ್ತಾರೆ. ಸದ್ಯ ಬನಶಂಕರಿ ಪೊಲೀಸರು ಕುಟುಂಬ ಸಮೇತ ಖದೀಮರನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ. ಮಾಜಿ ಬ್ಯಾಂಕ್ ಸಿಬ್ಬಂದಿ ಅಪೂರ್ವ ಯಾದವ್, ತಾಯಿ ವಿಶಾಲ, ಸ್ನೇಹಿತೆ ಅರುಂಧತಿ, ಅರುಂಧತಿ ಪತಿ ರಾಕೇಶ್ ಈ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

ಪದವೀಧರ ಆಗಿರುವ ಅಪೂರ್ವ ಯಾದವ್, ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀವನಕ್ಕೆಂದು ಕೆಲಸವಿದ್ದರೂ ಈ ಆರೋಪಿಗಳು ವೃದ್ಧೆಯೊಬ್ಬರಿಂದ ಬರೋಬ್ಬರಿ ಮೂರುವರೆ ಕೋಟಿ ಹಣ ದೋಚಿದ್ದಾರೆ. ವಯೋ  ವೃದ್ಧೆಯನ್ನ ವಂಚಿಸಿ ಬ್ಯಾಂಕ್ ಮೂಲಕವೇ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ವೃದ್ಧೆಯೊಬ್ಬರನ್ನು ಬ್ಯಾಂಕ್ಗೆ ಕರೆದುಕೊಂಡು ಬಂದು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಒಂದು ದಿನ 2.20 ಕೋಟಿ, ಮತ್ತೊಂದು ದಿನ 1.30 ಕೋಟಿ ಹಣ ವರ್ಗಾವಣೆ ಮಾಡಿಕೊಂಡು ಅಪೂರ್ವ, ಅರುಂಧತಿ ಸೇರಿ ತಲಾ 1.75 ಕೋಟಿ ಹಂಚಿಕೊಂಡು ವೃದ್ಧೆಗೆ ಪಂಗನಾಮ ಹಾಕಿದ್ದಾರೆ. ಸದ್ಯ ಶಿವಮೊಗ್ಗ ಮೂಲದ ವಂಚಕರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ ನಶಂಕರಿ ಎರಡನೇ ಹಂತ, ಪದ್ಮನಾಭನಗರದಲ್ಲಿ ವಾಸವಿದ್ದ ವೃದ್ಧೆ ಶಾಂತಾ(65)ರ ಪತಿ ಇತ್ತೀಚೆಗಷ್ಟೆ ತೀರಿಕೊಂಡಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಖದಿಮರಾದ ಅರುಂಧತಿ ಮತ್ತು ರಾಕೇಶ್ ದಂಪತಿ ವೃದ್ಧೆ ಇದ್ದ ಮನೆಯನ್ನು ಮಾರಾಟ ಮಾಡಿಸುವ ಹುನ್ನಾರ ಮಾಡಿದ್ದಾರೆ. ಮನೆಯಲ್ಲಿ ದೋಷ ಇದೆ ಮಾರಾಟ ಮಾಡಿ ಬಿಡಿ ಎಂದು ನಂಬಿಸಿದ್ದಾರೆ. ಬ್ರೋಕರ್ ಮತ್ತು ಖರೀದಿದಾರರನ್ನೂ ತಾವೆ ಕರೆಸಿ ಮಾರಾಟ ಮಾಡಿದ್ದಾರೆ. ಮನೆ ಮಾರಾಟವಾಗುತ್ತಿದ್ದಂತೆ ಮೂರುವರೆ ಕೋಟಿ ಹಣ ವೃದ್ಧೆ ಶಾಂತಾರ ಖಾತೆಗೆ ವರ್ಗಾವಣೆಗೊಂಡಿದೆ

 

ವರದಿಗಾರ

ಎ.ಚಿದಾನಂದ

Related