“ಜೂನಿಯರ್ ಚಿರು ಕಮಿಂಗ್ ಸೂನ್”

“ಜೂನಿಯರ್ ಚಿರು ಕಮಿಂಗ್ ಸೂನ್”

ಇಂದು ನಟ ದಿ. ಚಿರಂಜೀವಿ ಸರ್ಜಾ ಅವರ ಜನ್ಮದಿನ. ಪ್ರತಿ ವರ್ಷ ಚಿರಂಜೀವಿ ಜನ್ಮದಿನವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ಚಿರಂಜೀವಿ ಅಗಲಿರುವುದರಿಂದ ಅವರ ಅಭಿಮಾನಿಗಳು ಚಿರಂಜೀವಿಯವರ ಸಿನಿಮಾಗಳ ಮೂಲಕ ಆಚರಿಸಲು ನಿರ್ಧರಿಸಿದ್ದಾರೆ.

ಈಗಾಗಲೇ ಚಿರು ನಟನೆಯ “ಶಿವಾರ್ಜುನ’ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಇಂದು ಚಿರು ನಟನೆಯ “ಕ್ಷತ್ರಿಯ’ ಚಿತ್ರದ ಟೀಸರ್ ಹಾಗೂ “ರಾಜ ಮಾರ್ತಾಂಡ’ ಚಿತ್ರದ ಹಾಡುಗಳು ಬಿಡುಗಡೆಯಾಗಲಿವೆ.

ಸಹೋದರನ ಹುಟ್ಟುಹಬ್ಬಕ್ಕೆ ಇನ್ಸ್ ಸ್ಟಾಗ್ರಾಮ್‌ನಲ್ಲಿ ಶುಭಕೋರಿರುವ ಧ್ರುವ ಸರ್ಜಾ, “ಹ್ಯಾಪಿ ಬರ್ತ್ಡೇ ಚಿರು. ಮೈ ಲವ್ ಫಾರೆವರ್… ಜೂನಿಯರ್ ಚಿರು ಕಮಿಂಗ್ ಸೂನ್’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿರು ಪತ್ನಿ ಮೇಘನಾ ರಾಜ್ ಅವರ ಸೀಮಂತ ಸಮಾರಂಭದ ವಿಡಿಯೋವೊಂದನ್ನುಕೂಡಾ ಹಂಚಿಕೊಂಡಿದ್ದಾರೆ.

Related