4 ಕ್ಷೇತ್ರದಲ್ಲಿ ಜೆಡಿಎಸ್ ಸೋಲೋದು ಪಕ್ಕ: ಡಿಸಿಎಂ

4 ಕ್ಷೇತ್ರದಲ್ಲಿ ಜೆಡಿಎಸ್ ಸೋಲೋದು ಪಕ್ಕ: ಡಿಸಿಎಂ

ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು 4 ಕ್ಷೇತ್ರಕ್ಕೆ 4 ಕ್ಷೇತ್ರನೂ ಸೋಲುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ಸಮಾಜಕ್ಕೆ, ರಾಜ್ಯಕ್ಕೆಲ್ಲ ಸರ್ವಿಸ್ ಮಾಡೋಕೆ ನಮ್ಮ ಪಕ್ಷ ಯಾವತ್ತು ಹಿಂದೆ ಜರಿಯೋದಿಲ್ಲ, ಮುಂದೆ ಬಂದೇ ಬರುತ್ತದೆ ಎಂದು ಹೇಳಿದರು. ಇನ್ನು‌ ಜೆಡಿಎಸ್ ಪಕ್ಷವು 4 ಸೀಟು ಸೋಲ್ತಾರೆ, ದೇವೇಗೌಡರು ಬಿಜೆಪಿ ಸೀಟ್ ಅನ್ನು ಕೂಡ ನಮ್ಮ ಸೀಟ್‌ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.

ದೇವೇಗೌಡರು ತಮ್ಮ ಅಳಿಯನಿಗೆ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶ ಕಂಡಿರಬಹುದು, ಆದರೆ ಜೆಡಿಎಸ್ ಪಕ್ಷವು ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಲ್ಲ 4 ಸೀಟುಗಳಲ್ಲಿ ಸೋಲು ಅನಭವಿಸಲಿರುವುದು ಖಚಿತ, ಇದನ್ನು ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಶಿವಕುಮಾರ್ ಹೇಳಿದರು.

Related