ಸಾಗುವಳಿ ರೈತರಿಗೆ ಪಟ್ಟಾ ನೀಡಲು ಜೆಡಿಎಸ್ ಆಗ್ರಹ

ಸಾಗುವಳಿ ರೈತರಿಗೆ ಪಟ್ಟಾ ನೀಡಲು ಜೆಡಿಎಸ್ ಆಗ್ರಹ

ಸಂಡೂರು : ತಾಲೂಕಿನ ಬಗರ್ ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಪಟ್ಟಾ ಅಥವಾ ಪಹಣಿಯಾಗಲೀ ನೀಡಿರುವುದಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಯವರು ಸರ್ಕಾರದ ಅವಧಿಯಲ್ಲಿ ಆದೇಶವಾಗಿದ್ದರೂ, ಇದುವರೆಗೂ ಈಗಿನ ಬಿ.ಜೆ.ಪಿ. ಸರ್ಕಾರವಾಗಲೀ ಜಿಲ್ಲಾಡಳಿತವಾಗಲೀ, ತಾಲೂಕು ದಂಡಾಧಿಕಾರಿಗಳಾಗಲೀ, ಈ ವಿಚಾರದ ಬಗ್ಗೆ ಕ್ರಮ ಕೈಗೊಂಡಿಲ್ಲ.

ಸಂಡೂರು ತಾಲೂ ಕಿನಾದ್ಯಂತ ಸುಮಾರು 9 ಸಾವಿರ ರೈತರು ತಾಲೂ ಕು ಆಡಳಿತ ಕಚೇರಿಗೆ ಅರ್ಜಿ ನೀಡಿದರು. ಅಧಿಕಾರಿಗಳು ಮೌನವಹಿಸಿರುವುದಕ್ಕೆ ಕಾರಣವೇನು ? ಕೂಡಲೇ ಈ ರೈತರಿಗೆ ಪಟ್ಟಾ ಪಹಣಿಯನ್ನು ನೀಡಬೇಕು. ರೈತರನ್ನು ಒಕ್ಕಲೆಬ್ಬಿಸಿದರೆ, ಮುಂದಿನ ದಿನಗಳಲ್ಲಿ, 15 ದಿನಗಳ ಒಳಗೆ ಮಾಹಿತಿ ನೀಡದಿದ್ದಲ್ಲಿ, ಜೆ.ಡಿ.ಎಸ್. ತಾಲೂ ಕು ಘಟಕದ ವತಿಯಿಂದ ತಾಲೂ ಕಿನಾದ್ಯಂತ ಪಾದಯಾತ್ರೆ ಮೂಲಕ ತಾಲೂ ಕು ದಂಡಾಧಿಕಾರಿಗಳ ಕಚೇರಿಯ ಮುಂದೆ ಧರಣಿಯನ್ನ ಹಮ್ಮಿಕೊಳ್ಳುತ್ತೇವೆ ಎಂದು ಜೆ.ಡಿ.ಎಸ್. ತಾ.ಘಟಕದ ಅಧ್ಯಕ್ಷ ಕುರೆಕುಪ್ಪಾದ ಸೋಮಪ್ಪನವರು ತಾ. ದಂಢಾಧಿಕಾರಿಗಳವರ ಕಚೇರಿಯಲ್ಲಿ ತಹಶೀಲ್ದಾರ್ ಎಚ್.ಜಿ. ರಶ್ಮಿಯವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿ ಹುಸೇನ್ ಪೀರಾ, ಡಿ. ಎಂ. ಹೊನ್ನೂರಸಾಬ್, ಕೆ. ಮೆಹಬೂಬ್ ಬಾಷ, ಬಾವಿ ಶಿವಕುಮಾರ್, ಜೆ.ದೊಡ್ಡಪ್ಪ, ಬಿ. ಮೆಹಬೂಬ್ ಸಾಬ್, ಸೈಯದ್ ಸಾಬ್, ಮೊಹಮ್ಮದ್ ಯುಸೂಫ್ ಹುಸೇನ್ ಬಾಷ ರೆಹೆಮತ್ ,ಶರಮಸ್ ವಲಿ, ಜೋಗಲ ಪಕ್ಕೀರಪ್ಪ, ಲಾಲ್ ಸ್ವಾಮಿ, ಉಮರ್ ಫಾರೂಕ್ , ಉಪಸ್ಥಿತರಿದ್ದರು.

Related