ಇಂದಿನಿಂದ ನಟಿಯರಿಗೆ ಜೈಲೂಟ ಫಿಕ್ಸ್!

ಇಂದಿನಿಂದ ನಟಿಯರಿಗೆ ಜೈಲೂಟ ಫಿಕ್ಸ್!

ಬೆಂಗಳೂರು : ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿಗೆ ಇಂದಿನಿಂದ ಜೈಲೂಟವೇ ಫಿಕ್ಸ್ ಆಗಿದೆ. ಸಾಮಾನ್ಯ ಖೈದಿಗಳ ಸೆಲ್‌ಗೆ ಅವರನ್ನು ಶಿಫ್ಟ್ ಮಾಡಲಾಗಿದೆ.

ರಾಗಿಣಿ ಹಾಗೂ ಸಂಜನಾ ಅವರಿಗೆ ಎನ್‌ಡಿಪಿಎಸ್ ಕೋರ್ಟ್ನಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ನಟಿಯರ ಜೈಲಿನ ಕ್ವಾರಂಟೈನ್ ಅವಧಿ ಮುಗಿದಿದೆ. ಇಂದಿನಿAದ ನಟಿಯರಿಬ್ಬರೂ ಸಾಮಾನ್ಯ ಖೈದಿಗಳಾಗಿದ್ದು, ಇತರ ಖೈದಿಗಳ ಜೊತೆ ಸರತಿ ಸಾಲಿನಲ್ಲಿ ನಿಂತು ಊಟ, ಉಪಹಾರವನ್ನು ತೆಗೆದುಕೊಳ್ಳಬೇಕಿದೆ.

ಕಳೆದ 14 ದಿನಗಳಿಂದ ನಟಿಯರಿಬ್ಬರೂ ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ನಲ್ಲಿದ್ದರು. ಹೀಗಾಗಿ ಪ್ರತಿದಿನ ನಟಿಯರಿಗೆ ಊಪಹಾರ, ಊಟ, ಬಟ್ಟೆ ಎಲ್ಲವೂ ಪೂರೈಕೆಯಾಗುತ್ತಿತ್ತು. ಆದರೆ ಇಂದಿನಿಂದ ಸಾಮಾನ್ಯ ಖೈದಿಗಳಂತೆ ಕಾಲ ಕಳೆಯಬೇಕಾದ ಸ್ಥಿತಿ ಬಂದಿದೆ.

Related