ಬಿಜೆಪಿಗೆ ಸೇರುವುದು ಅಸಾಧ್ಯದೆ ಗ್ರಾ.ಪಂ ಅಧ್ಯಕ್ಷ

ಬಿಜೆಪಿಗೆ ಸೇರುವುದು ಅಸಾಧ್ಯದೆ ಗ್ರಾ.ಪಂ ಅಧ್ಯಕ್ಷ

ಗಂಗಾವತಿ : ತಾಲೂಕಿನ ಕೇಸರಹಟ್ಟಿ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿತ್ತು ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಸವರಾಜ ಹಳ್ಳಿ, ಉಪಾಧ್ಯಕ್ಷರಾಗಿ ಶ್ರೀಮತಿ ವಿರುಪಮ್ಮ ವೀರೇಶ ಬೋವಿ ಇವರು ತಲಾ 18 ಮತಗಳನ್ನು ಪಡೆಯುವುದರ ಮೂಲಕ ವಿಜಯಶಾಲಿಗಳಾಗಿದ್ದಾರೆ.

ಗಂಗಾವತಿ ವಿಧಾನಸಭಾ ಕ್ಷೇತ್ರ ಬಿಜೆಪಿಯ ಶಾಸಕ ಪರಣ್ಣ ಮುನವಳ್ಳಿ ಮನೆಗೆ ಮಾಜಿ ಶಾಸಕರಾದ ಕೇಸರಹಟ್ಟಿ ಜಿ ವೀರಪ್ಪ ಇವರ ಜೊತೆಗೆ ಗ್ರಾ.ಪಂ ಅಧ್ಯಕ್ಷ ಬಸವರಾಜ ಹಳ್ಳಿ ಭೇಟಿ ನೀಡಿ ಶಾಸಕರಿಗೆ, ಕಾಡ ಅಧ್ಯಕ್ಷರಿಗೆ ಕಾಡ ಮಾಲಾರ್ಪಣೆ ಮಾಡಿದರು.

ವಿಷಯವನ್ನು ಕೆಲವರು ಅಪಾರ್ಥ ತಿಳಿದುಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.

ಈ ವೇಳೆ ಬಸವರಾಜ ಹಳ್ಳಿ ಮಾತನಾಡಿ, ನಾನು ಶಾಸಕರ ಮನೆಗೆ ಹೋಗಿದ್ದು ನಿಜ ಅವರು ನಮ್ಮ ಸಮಾಜದ ರಾಜ್ಯ ಉಪಾಧ್ಯಕ್ಷರಾಗಿದ್ದು, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಸೇರಿಲ್ಲ ಮತ್ತು ಸೇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಒಟ್ಟು 23 ಸದಸ್ಯರು ಇರುವ ಈ ಪಂಚಾಯಿತಿಯಲ್ಲಿ 18 ಜನ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದರಿಂದ ನಾನು ಗ್ರಾ.ಪಂ ಅಧ್ಯಕ್ಷನಾಗಿದ್ದೇನೆ. ಕೇವಲ ಐದು ಜನರನ್ನು ಹೊಂದಿರುವ ಬಿಜೆಪಿ ಪಕ್ಷಕ್ಕೆ ಹೋಗಲು ಪ್ರಮೇಯವೇ ಇಲ್ಲ. ನಾನು ಸಹ ಮೂಲತ ಕಾಂಗ್ರೆಸ್‌ನವರು ಆಗಿದ್ದು ನನಗೆ ಬಿಜೆಪಿ ಇಷ್ಟ ಇಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿರುಪಮ್ಮ, ಸದಸ್ಯ ನಿರುಪಾದಿ ಗೌಡ ಮಾಲಿ ಪಾಟೀಲ್, ವಿಶ್ವನಾಥ ಸ್ವಾಮಿ, ಯಮನೂರಪ್ಪ ಕುರಿ, ಲಿಂಗಪ್ಪ ಬೋವಿ, ಫಾತಿಮಾ, ರವಿ ಪಂಪಣ್ಣ, ಯಮುನಾ ಬಿ, ದೇವರಾಜ ನಾಯಕ, ಯಮನೂರಪ್ಪ ಹರಿಜನ, ಶಕುಂತಲಾ, ಕಾಂಗ್ರೆಸ್ ಮುಖಂಡರಾದ ವಿಶ್ವನಾಥ ಮಾಲಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಿದ್ದರು.

Related