ಆಗ ಮಿಸ್ ವರ್ಲ್ಡ್ ಆಗಿದ್ದ ಐಶ್ವರ್ಯ ರೈ, ಈಗ ಅಜ್ಜಿ ರೀತಿ ಕಾಣುತ್ತಾಳೆ ಮತ್ತೆ ಟ್ರೋಲ್..!!

  • In Cinema
  • May 20, 2022
  • 226 Views

ಕೇನ್ಸ್ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಐಶ್ವರ್ಯ ರೈ ತ್ವಚೆಯ ಕ್ಲೋಸಪ್ನೋಡಿ ನೆಟ್ಟಿಗರು ಶಾಕ್. ಅಜ್ಜಿ ಎಂದು ಕಾಲೆಳೆಯುತ್ತಿರುವುದು ಯಾಕೆ?


1994 ಮಿಸ್ ವರ್ಲ್ಡ್(Miss World), ಬಾಲಿವುಡ್ಬ್ಯೂಟಿ ಐಶ್ವರ್ಯ ರೈ ತಪ್ಪದೆ ಕೇನ್ಸ್ಚಲನಚಿತ್ರೋತ್ಸವದಲ್ಲಿ ಭಾಗಿಯಾಗುತ್ತಾರೆ. ವಿಭಿನ್ನ ಡಿಸೈನರ್ವೇರ್ಗಳನ್ನು ಆಯ್ಕೆ ಮಾಡಿಕೊಂಡು ರೆಡ್ಕಾರ್ಪೆಟ್ಮೇಲೆ ಮಿಂಚುತ್ತಾರೆ.


ಕೆಲವು ದಿನಗಳ ಹಿಂದೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ ಪ್ರೈವೇಟ್ ಜೆಟ್ನಲ್ಲಿ ಕೇನ್ಸ್ ಕಾರ್ಯಕ್ರಮಕ್ಕೆ ಹೊರಟರು. ಏರ್ಪೋರ್ಟ್ಲುಕ್ಗೆ ಐಶ್ವರ್ಯ ಮಾಡಿಕೊಂಡಿದ್ದ ಮೇಕಪ್ಲುಕ್ ನೆಟ್ಟಿಗರಿಗೆ ಇಷ್ಟವಾಗಿರಲಿಲ್ಲ.

ಕೇನ್ಸ್ರೆಡ್ಕಾರ್ಪೆಟ್ಗೆ ಐಶ್ವರ್ಯ  D&G ಅವರ ಬ್ಲ್ಯಾಕ್ ಗೌನ್ ಧರಿಸಿದ್ದರು. ಗೌನ್ನ ಒಂದೊಂದು ಕಾರ್ನರ್ಗಳಿಗೆ ಹೂಗಳಿಂದ ಡಿಸೈನ್ ಮಾಡಲಾಗಿತ್ತು. ಕಣ್ಣಿಗೆ ಮಾತ್ರ ಹೆಚ್ಚಿನ ಮೇಕಪ್ ಮಾಡಲಾಗಿತ್ತು.

Related