ಶಹಾಪುರ: ಭೀಮರಾಯನಗುಡಿ ಕೆ.ಬಿ.ಜೆ.ಎನ್.ಎಲ್ ವ್ಯಾಪ್ತಿಯಲ್ಲಿ ಸುಮಾರು ಒಂದು ವರ್ಷಗಳಿಂದ ಕೈಗೊಂಡ ಕಾಮಗಾರಿ ಪೂರ್ಣಗೊಂಡಿದ್ದು, ಈ ವರೆಗೆ ಬಿಲ್ಲುಗಳು ಪಾವತಿಯಾಗಿಲ್ಲಾ. ಇದರಿಂದ ಗುತ್ತಿಗೆದಾರರು ಕುಟುಂಬ ಸಮೇತ ಬೀದಿಗೆ ಬೀಳಬೇಕಾದ ಪರಿಸ್ಥೀತಿ ಬಂದಿದ್ದು ಆತ್ಮಹತ್ಯೆ ಒಂದೇ ದಾರಿ ಎಂದು ನೊಂದ ಗುತ್ತಿಗೆದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಈಗಾಗಲೇ ಪ್ರತಿಭಟನೆಗೆ ಕರೆ ನೀಡಿದ್ದ ಗುತ್ತಿಗೆದಾರರ ಸಂಘವು, ಅಧಿಕಾರಿಗಳು ಬಿಲ್ ಪಾವತಿಸುವ ಭರವಸೆ ನೀಡಿದ್ದರಿಂದ ತಾತ್ಕಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದೆ. ಬಳಿಕ ಕೃ.ಭಾ.ಜ.ನಿ.ನಿ ಕಾಲುವೆಯ ಲೆಕ್ಕಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು, ಹಾಗೂ ಇಲಾಖೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಗುತ್ತಿಗೆದಾರರು, ಸಾಲಗಾರರ ಭೀತಿಗೆ ಮನೆಯಿಂದ ಹೊರ ಬರಲು ಸಹ ಹಿಂಜರೆಯುತ್ತಿದ್ದಾರೆ. ಇಂತಿಷ್ಟು ತಿಂಗಳುಗಳಲ್ಲಿ ಕಾಮಗಾರಿ ಮುಗಿಯಬೇಕೆಂದು ಹೇಳುವ ಸರ್ಕಾರ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡುತ್ತಿಲ್ಲಾ. ಬಿಲ್ ಪಾವತಿ ಮಾಡದೆ ಸರ್ಕಾರ ಹಾಗೂ ಇಲಾಖೆ ಸತಾಯಿಸುತ್ತಿದೆ. ಸುಮಾರು ಒಂದು ವರ್ಷದಿಂದ ಬಿಲ್ ಬಾಕಿ ಇದ್ದು, ಕನಿಷ್ಠ ಶೇ.50 ರಷ್ಟಾದರೂ ಬಾಕಿ ಪಾವತಿಯನ್ನಾದರು ಮಾಡಿ. ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿ ಇದ್ದು, ಮನೆ, ಒಡವೆಗಳನ್ನು ಒತ್ತೆ ಹಿಟ್ಟು ಕಾಮಗಾರಿ ಮಾಡಿ ಇದೀಗ ಮಾಡಿದ ಕಾಮಗಾರಿಗೆ ಬಿಲ್ ಆಗದೇ ಇದ್ದು, ಸಾಲಭಾದೆ ತಾಳಲಾರದೆ ಆತ್ಮಹತ್ಯೆಯಂತಹ ತೀರ್ಮಾನಕ್ಕೂ ಬಂದಿದ್ದಾರೆ. ಯಾರು ಸಹ ಗುತ್ತಿಗೆದಾರರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಗುತ್ತಿಗೆದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಗುತ್ತಿಗೆದಾರರ ಜೀವ ಹಿಂಡುತ್ತಿದೆ. ಬಾಕಿ ಬಿಲ್ ಪಾವತಿಯಾಗದೇ ಗುತ್ತಿಗೆದಾರರು ಬದುಕಿದ್ದಾಗಲೇ ನರಕ ಅನುಭವಿಸುತ್ತಿದ್ದಾರೆ. ಬಿಲ್ ಪಾವತಿಗಾಗಿ ನಿತ್ಯ ಕಚೇರಿಗೆ ಅಲೆದರು ಏನು ಪ್ರಯೋಜನವಾಗುತ್ತಿಲ್ಲ. ದಿ.25 ರಂದು ಪ್ರತಿಭಟನೆಗೆ ಗುತ್ತಿಗೆದಾರರ ಸಂಘ ಕರೆ ನೀಡಿತ್ತು ಆದರೆ ಇದಕ್ಕೆ ಸ್ಪಂದಿಸಿ ಸಿಎಓ, ಸಿ.ಇ, ಎಸ್.ಸಿ ಅವರು ಆಗಸ್ಟ್ ಮೊದಲನೇ ವಾರ ಕಾಮಗಾರಿಗಳ ಬಿಲ್‌ಗಳನ್ನು ಪಾವತಿ ಮಾಡುವ ಭರವಸೆ ನೀಡಿದ್ದಾರೆ. ಒಂದು ವೇಳೆ ಬಿಲ್ ಪಾವತಿ ಮಾಡದಿದ್ದರೆ ಆ.೮ ರಂದು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ನಾನಾಗೌಡ ಎಂ.ಬಿರಾದಾರ. (ಗುತ್ತಿಗೆದಾರರ ಸಂಘದ ಅಧ್ಯಕ್ಷ) ಹೇಳಿದರು. ಇದನ್ನೂ ಓದಿ: ಇಂದು ದೆಹಲಿಗೆ ತೆರಳಲ್ಲಿರುವ ಸಿಎಂ, ಡಿಸಿಎಂ
ಸುಮಾರು 800 ಕಾಮಗಾರಿಗಳ ಬಿಲ್‌ಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಸರ್ಕಾರದಿಂದ ಅನುದಾನ ಸಹ ಬಿಡುಗಡೆಯಾಗಿದೆ. ಆದಷ್ಟು ಬೇಗ ಅಂದರೆ 10 ದಿನಗಳೊಳಗೆ ಬಿಲ್ ಪಾವತಿಯಾಗಲಿದೆ. ಗುತ್ತಿಗೆದಾರರು ಆತಂಕ ಪಡುವ ಅಗತ್ಯವಿಲ್ಲಾ ಎಂದು ಡಾ.ಮಹೇಶ ಮಾಲಗತ್ತಿ. ಕೃ.ಭಾ.ಜ.ನಿ.ನಿ ಅಧಿಕಾರಿ ಹೇಳಿದರು.
ಈ ಸಂದರ್ಭದಲ್ಲಿ ಶಿವುಕುಮಾರ ಬಡಿಗೇರ, ದೇವಪ್ಪ ನಾಟೇಕರ, ಅಯ್ಯಣ್ಣ ಸಿದ್ದಾಪುರ, ರಾಜಕುಮಾರ ಆಂದೇಲಿ ಇದ್ದರು.
