ಬೆಂಗಳೂರು: ರಾಜ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಗುದ್ದಾಟ ಜೋರಾಗಿರುವ ಬೆನ್ನಲ್ಲೇ ಮತ್ತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿ ಪ್ರವಾಸ ಕೈಗೊಂಡಿರುವುದರಿಂದ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಇಂದು ದೆಹಲಿ ಪ್ರವಾಸವನ್ನು ಕೈಗೊಂಡಿರುವ ಸಿಎಂ, ಡಿಸಿಎಂ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಕಳೆದ ಬಾರಿ ಡೆಲ್ಲಿಯಲ್ಲಿ ನಾನೇ 5 ವರ್ಷ ಸಿಎಂ ಎಂದಿದ್ದ ಸಿದ್ದು ಮತ್ತೇನು ಬಾಂಬ್ ಸಿಡಿಸಲಿದ್ದಾರೆ ಎಂಬ ಕೌತುಕ ಮೂಡಿದೆ.
ಕಳೆದ ಬಾರಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಭೇಟಿಗೆ ಕಾಲಾವಕಾಶ ಸಿಗದೇ ಸಿಎಂ ವಾಪಸ್ ಆಗಿದ್ದರು. ಇದೀಗ ಇಂದು ಮತ್ತೆ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ. ಡಿಸಿಎಂ ಕೂಡಾ ಹೈ ನಾಯಕರ ಭೇಟಿಗೆ ತೆರಳಲಿದ್ದಾರೆ. ಈ ಬಾರಿಯಾದರು ಸಿದ್ದು-ಡಿಕೆ ರಾಹುಲ್ ಗಾಂಧಿಯನ್ನ ಭೇಟಿಯಾಗ್ತಾರಾ ಎಂಬ ಕೌತುಕ ಮೂಡಿದೆ. ಇದನ್ನೂ ಓದಿ: ಸಿಹಿ ವಿತರಿಸಿದ ಕಾಂಗ್ರೆಸ್ ಕಾರ್ಯಕರ್ತರು
ಇಂದು ಬೆಂಗಳೂರಿನಿಂದ ದೆಹಲಿಗೆ ಮಧ್ಯಾಹ್ನ 3:00ಗೆ ತೆರಳಿರುವ ವರದಿಯಾಗಿದೆ. ಅಲ್ಲದೆ ನಾಳೆ ಜುಲೈ 25ರಂದು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
